Ad

ಕರಾಚಿಯಲ್ಲಿ ಬಿಸಿಲಿನ ಝಳಕ್ಕೆ 4 ದಿನದಲ್ಲಿ 450 ಸಾವು

ಪಾಕಿಸ್ತಾನದ ಕರಾಚಿಯಲ್ಲಿ ಬಿಸಿಲಿನ ಝಳಕ್ಕೆ ಕೇವಲ 4 ದಿನದಲ್ಲಿ 450 ಸಾವನಪ್ಪಿದ್ದಾರೆ. ಈ ಬಗ್ಗೆ ಎನ್‌ ಜಿಒ ಈಧಿ ಸಂಸ್ಥೆ ತಿಳಿಸಿದೆ.

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಬಿಸಿಲಿನ ಝಳಕ್ಕೆ ಕೇವಲ 4 ದಿನದಲ್ಲಿ 450 ಸಾವನಪ್ಪಿದ್ದಾರೆ. ಈ ಬಗ್ಗೆ ಎನ್‌ ಜಿಒ ಈಧಿ ಸಂಸ್ಥೆ ತಿಳಿಸಿದೆ. ಕರಾಚಿಯಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ 40 ಡಿ.ಸೆ. ತಾಪಮಾನವಿದ್ದು, ಸಮುದ್ರ ತೀರದಲ್ಲಿ ಬಿಸಿ ಹವೆ ಹೆಚ್ಚಳವಾಗಿದೆ.

Ad
300x250 2

ನಮ್ಮಲ್ಲಿ 4 ಶವಾಗಾರವಿದ್ದು ಈವರೆಗೆ 427 ಮೃತದೇಹಗಳನ್ನು ಸ್ವೀಕರಿಸಿದ್ದೇವೆ. ಉಳಿದ 23 ಮೃತದೇಹಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. ಮೃತಪಟ್ಟವರಲ್ಲಿ ಬಹುತೇಕರು ಬಡವರಾಗಿದ್ದು, ದಿನವಿಡೀ ಬಿಸಿಲಿನ ಶಾಖಕ್ಕೆ ತುತ್ತಾಗಿದ್ದಾರೆ ಎಂದು ಈಧಿ ಸಂಸ್ಥೆಯ ಮುಖ್ಯಸ್ಥ ಫೈಸಲ್‌ ಈಧಿ ತಿಳಿಸಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಮುನ್ನಚ್ಚರಿಕೆ ವಹಿಸುವಂತೆ ಸರ್ಕಾರ ತಿಳಿಸಿದೆ.

Ad
Ad
Nk Channel Final 21 09 2023
Ad