News Karnataka Kannada
Thursday, April 18 2024
Cricket
ವಿದೇಶ

300 ರೂಪಾಯಿ ಪಡೆಯಲು ಹೋಗಿ 1.90 ಲಕ್ಷ ರೂ. ಹಣ ಕಳೆದುಕೊಂಡ ಮಹಿಳೆ

Photo Credit :

300 ರೂಪಾಯಿ ಪಡೆಯಲು ಹೋಗಿ 1.90 ಲಕ್ಷ ರೂ. ಹಣ ಕಳೆದುಕೊಂಡ ಮಹಿಳೆ

ಹೈದರಾಬಾದ್​: 300 ರೂಪಾಯಿ ಪಡೆಯಲು ಹೋಗಿ 1.90 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ಹಣ ಕಳೆದುಕೊಂಡ ಯುವತಿ ಇದೀಗ ಸೈಬರ್​ ಕ್ರೈಂ ಪೊಲೀಸ್​ ಠಾಣೆಯ ಮೆಟ್ಟಿಲು ಹೇರಿದ್ದಾಳೆ.

 

ಉಷಾ ರಾಣಿ ಎಂಬಾಕೆ ಆನ್​ಲೈನ್​ನಲ್ಲಿ ಕೆಲವು ವಸ್ತುಗಳನ್ನು ತರಿಸಿಕೊಂಡಿದ್ದು, ಆ ವಸ್ತುಗಳನ್ನು ಕೊರಿಯರ್​ ಕಂಪನಿಯೊಂದು ಡೆಲಿವರಿ ಮಾಡಿತು. ಈ ವೇಳೆ ಡೆಲಿವರಿ ಬಾಯ್​, ಉಷಾರಾಣಿಗೆ ಬಾಕಿ 300 ರೂಪಾಯಿ ಕೊಡದೇ ಹಿಂದಿರುಗಿದ. 

 

ಇದಾದ ಬಳಿಕ ಉಷಾರಾಣಿ ಡೆಲಿವರಿ ಬಾಯ್​ಗೆ ಕರೆ ಮಾಡಿದ್ದಾಳೆ. ಆದರೆ, ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕಸ್ಟಮರ್​ ಕೇರ್​ಗೆ ಕರೆ ಮಾಡಿ ದೂರು ನೀಡಿದ್ದಾಳೆ. ಬಳಿಕ ಕಂಪನಿಯ ಓರ್ವ ವ್ಯಕ್ತಿ ಉಷಾರಾಣಿಗೆ ಅರ್ಜಿಯೊಂದನ್ನು ಕಳುಹಿಸಿ ಇದನ್ನು ಭರ್ತಿ ಮಾಡಿ ಕಳುಹಿಸಿ ನಿಮ್ಮ ಹಣ ಹಿಂದಿರುಗುತ್ತದೆ ಎಂಬ ಭರವಸೆ ನೀಡಿದ್ದಾರೆ.

 

ಆದರೆ ಅರ್ಜಿಯನ್ನು ತುಂಬಿ ಕಲಿಸಿದ ಮೇಲೆ ಹಣವನ್ನು ಮರುಪಾವತಿಸುವ ಬದಲು ಆಕೆಯ ಖಾತೆಯಲ್ಲಿದ್ದ 91 ಸಾವಿರ ಹಣವನ್ನು ಪ್ರಾರಂಭದಲ್ಲಿ ಎಗರಿಸಿದ್ದಾರೆ. ಬಳಿಕ ಉಷಾರಾಣಿ ಮತ್ತೆ ಕರೆ ಮಾಡಿದಾಗ ತಪ್ಪಾಗಿ ಭರ್ತಿ ಮಾಡಿದ್ದರಿಂದ ಈ ಪ್ರಮಾದ ಆಗಿದೆ ಮತ್ತೊಮ್ಮೆ ಭರ್ತಿ ಮಾಡಿ ಕಳುಹಿಸಿ ಎಂದಿದ್ದಾರೆ.

 

ಅವರ ಮಾತನ್ನು ನಂಬಿ ಮತ್ತೆ ಭರ್ತಿ ಮಾಡಿ ಕಳುಹಿಸಿದಾಗಲೂ ಮತ್ತೆ 99 ಸಾವಿರ ಹಣವನ್ನು ಖಾತೆಯಿಂದ ಎಗರಿಸಿದ್ದಾರೆ. ಇದಾದ ಬಳಿಕ ಆಕೆಗೆ ತಾನು ಮೋಸ ಹೋಗಿರುವುದು ಅರಿವಾಗಿ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು