News Karnataka Kannada
Saturday, April 20 2024
Cricket
ವಿದೇಶ

20 ವರ್ಷಗಳ ನಂತರ ಕುಖ್ಯಾತ ಹುಲಿ ಬೇಟೆಗಾರನನ್ನು ಬಂಧಿಸಿದ ಪೊಲೀಸರು

Photo Credit :

20 ವರ್ಷಗಳ ನಂತರ ಕುಖ್ಯಾತ ಹುಲಿ ಬೇಟೆಗಾರನನ್ನು ಬಂಧಿಸಿದ ಪೊಲೀಸರು

ಢಾಕಾ : 70ಕ್ಕೂ ಹೆಚ್ಚು ಹುಲಿಗಳನ್ನು ಕೊಂದು ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಬೇಟೆಗಾರನೊಬ್ಬ ನನ್ನು ಬಾಂಗ್ಲಾದ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

 

ಬಂಗಾಳ ಸುಮಾರು 70ಕ್ಕೂ ಹೆಚ್ಚು ಹುಲಿಗಳನ್ನು ಹತ್ಯೆ ಮಾಡಿದ್ದ ಎನ್ನಲಾದ ಟೈಗರ್ ಹಬೀಬ್ ಎಂದೇ ಕುಖ್ಯಾತನಾಗಿದ್ದ ಹಬೀಬ್ ತಾಲೂಕ್ಲಾರ್ ನನ್ನು ದಕ್ಷಿಣ ಬಗರ್‌ಹಾತ್ ಪ್ರದೇಶದ ಅವನ ಮನೆಯಲ್ಲಿ ಹಬೀಬ್‌ನನ್ನು ಪೊಲೀಸರು ಬಂಧಿಸಿದ್ದಾರೆ . ಭಾರತ ಮತ್ತು ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಸುಂದರಬನ ಮ್ಯಾಂಗೋವ್ ಕಾಡುಗಳ ಸಮೀಪ ಜೇನು ಸಾಕಣೆ ನೆಪದಲ್ಲಿ ಹುಲಿಗಳನ್ನು ಈತ ಬೇಟೆಯಾಡುತ್ತಿದ್ದ ಎಂದು ಆರೋಪಿಸಲಾಗಿದೆ. 

 

ಈತ ತನ್ನ 20 ನೇ ವಯಸ್ಸಿನಲ್ಲಿಯೇ ಹುಲಿ ಬೇಟೆ ಆಡುವುದನ್ನು ಆರಂಭಿಸಿದ್ದ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ .

 

 ಅಧಿಕಾರಿಗಳು ಈತ ವಾಸಿಸುವ ಸ್ಥಳದ ಮೇಲೆ ದಾಳಿ ನಡೆಸಿದಾಗಲೆಲ್ಲ ತಪ್ಪಿಸಿಕೊಳ್ಳುತ್ತಿದ್ದ . ಈತನಿಂದ ಹುಲಿಯ ಚರ್ಮ , ಹಲ್ಲು , ಮೂಳೆಗಳು ಹಾಗೂ ಮಾಂಸವನ್ನು ಕಾಳಸಂತೆ ವ್ಯಾಪಾರಿಗಳು ಖರೀದಿಸಿ ಚೀನಾ ಹಾಗೂ ಬೇರೆಡೆ ಮಾರಾಟ ಮಾಡುತ್ತಿದ್ದರು . ಸುಂದರಬನ ಕಾಡುಗಳಲ್ಲಿ ಕಾಡು ಪ್ರಾಣಿಗಳ ಬೇಟೆಯಲ್ಲಿ ತೊಡಗಿರುವ ಗ್ಯಾಂಗಿನ ಜತೆಗೂ ಹಬೀಬ್ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು