News Karnataka Kannada
Saturday, April 13 2024
Cricket
ವಿದೇಶ

18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ: ದೇಶದ ಮೊದಲ ಪ್ರಕರಣ

Photo Credit :

18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ: ದೇಶದ ಮೊದಲ ಪ್ರಕರಣ

ನವದೆಹಲಿ: ರಾಜಸ್ಥಾನದ ಬಿಕನೇರ್​ನಲ್ಲಿ 18 ತಿಂಗಳ ಮಗುವಿಗೆ ಅಪಾಯಕಾರಿ ಕಪ್ಪು ಶಿಲೀಂದ್ರ (ಬ್ಲ್ಯಾಕ್ ಫಂಗಸ್) ಸೋಂಕು ತಗುಲಿದೆ. ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬಂದ ಮೊದಲ ಪ್ರಕರಣ ಇದಾಗಿದೆ.
ಕರೊನಾ ಪ್ರಕರಣಗಳ ಜತೆಗೆ ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಕೋವಿಡ್​ನಿಂದ ಗುಣವಾದವರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದ್ದು, ವೈದ್ಯಲೋಕಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.
ಮ್ಯೂಕೋರ್ಮೈಕೋಸಿಸ್ ಎಂದು ಕರೆಯಲ್ಪಡುವ ಮೌಲ್ಡ್​ಗಳ ಗುಂಪಿನಿಂದ ಬ್ಲ್ಯಾಕ್​ ಫಂಗಸ್​ ಉಂಟಾಗುತ್ತದೆ. ಮೂಗಿನಿಂದ ಹರಡುವ ಈ ಫಂಗಸ್​ ಕಣ್ಣುಗಳು ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹರಡುತ್ತದೆ.
ಕರೊನಾ, ಮದುಮೇಹ, ಕಿಡ್ನಿ ಸಮಸ್ಯೆ, ಲಿವರ್​ ಅಥವಾ ಹೃದಯ ಸಂಬಂಧಿ ಮತ್ತು ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಸಂಧಿವಾತದಂತಹ ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳಿಗೆ ಔಷಧಗಳನ್ನು ಹೊಂದಿರುವ ಮತ್ತು ಇಮ್ಯುನಿಟಿ ಕಡಿಮೆ ಇರುವವರಲ್ಲಿ ಈ ಬ್ಲ್ಯಾಕ್​ ಫಂಗಸ್​ ಕಂಡುಬರುತ್ತದೆ.
ಇಂತಹ ರೋಗಿಗಳಿಗೆ ಪ್ರತಿರಕ್ಷೆಯ ಸ್ಟೀರಾಯ್ಡ್​ಗಳನ್ನು ನೀಡಿದ ಬಳಿಕ ಇಮ್ಯುನಿಟಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದು ಶಿಲೀಂಧ್ರವನ್ನು ಹರಡಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಫಂಗಸ್​ ಕಣ್ಣಿಗೆ ಹರಡಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ.
ಇದೀಗ 18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್​ ಫಂಗಸ್​ ಕಂಡುಬಂದಿರುವುದು ಆಘಾತದ ಜತೆಗೆ ಆತಂಕವನ್ನು ಉಂಟುಮಾಡಿದೆ. ಮಗುವಿಗೆ ಚಿಕಿತ್ಸೆ ಮುಂದುವರಿದಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು