News Karnataka Kannada
Wednesday, April 17 2024
Cricket
ವಿದೇಶ

14 ದಿನಗಳ ಲಾಕ್‌ ಡೌನ್‌ ಮಾರ್ಗ ಸೂಚಿ

Photo Credit :

 14 ದಿನಗಳ  ಲಾಕ್‌ ಡೌನ್‌  ಮಾರ್ಗ ಸೂಚಿ

ಬೆಂಗಳೂರು: ಕೊರೋನಾ 2ನೇ ಅಲೆ ಅಬ್ಬರಕ್ಕೆ ಬ್ರೇಕ್​ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್​ಡೌನ್​ ಹೇರಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಮೇ 12ರವರೆಗೆ ಹೊಸ ಲಾಕ್​ಡೌನ್​​ ಮಾರ್ಗಸೂಚಿ ಅನ್ವಯವಾಗಲಿದೆ. ನಾಳೆಯಿಂದ 14 ದಿನಗಳ ಕಾಲ ಟಫ್​ ರೂಲ್ಸ್​​ ಜಾರಿಯಲ್ಲಿರಲಿದ್ದು ಆಟೋ, ಟ್ಯಾಕ್ಸಿ ಸಂಚಾರ ಬಂದ್ ಆಗಲಿದೆ. ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಬಂದ್​ ಆಗಲಿವೆ. ಚಿತ್ರಮಂದಿರಗಳು, ಶಾಪಿಂಗ್​ ಮಾಲ್​, ಯೋಗ ಕೇಂದ್ರ, ಜಿಮ್​ , ಸಲೂನ್​​ಗೆ ನಿರ್ಬಂಧ ಹೇರಲಾಗಿದೆ. ಇನ್ನು ಆನ್​ಲೈನ್​ ಫುಡ್​​ ಆರ್ಡರ್​​ಗೆ ಅನುಮತಿ ನೀಡಲಾಗಿದೆ. ಹೋಟೆಲ್​-ರೆಸ್ಟೋರೆಂಟ್​ಗಳಲ್ಲಿ ಪಾರ್ಸಲ್​ ತೆಗೆದುಕೊಳ್ಳಬಹುದಾಗಿದೆ.
ಮೇ 12ರವರೆಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಸಂಪೂರ್ಣ ನಿರ್ಬಂಧವೇರಲಾಗಿದೆ. ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯಲ್ಲ. ತುರ್ತು ಸೇವೆಗೆ ಮಾತ್ರ ಆಟೋ, ಟ್ಯಾಕ್ಸಿ ಸೇವೆ ಇರಲಿದೆ. ರಾಜ್ಯಾದ್ಯಂತ ಖಾಸಗಿ ಬಸ್​​​ಗಳ ಸಂಚಾರಕ್ಕೂ ನಿರ್ಬಂಧವೇರಲಾಗಿದ್ದು, ನಾಳೆ ರಾತ್ರಿ 9 ಗಂಟೆ ಬಳಿಕ ಯಾವುದೇ ಬಸ್​ಗಳು ರಸ್ತೆಗಿಳಿಯಲ್ಲ. ಇನ್ನು ವಿಮಾನ ಸೇವೆ ಅಭಾದಿತವಾಗಿರೋದರಿಂದ ಏರ್​ಪೋರ್ಟ್​ ಟ್ಯಾಕ್ಸಿ ಸೇವೆ ಲಭ್ಯವಿರಲಿದೆ. ಅಂತರ್​ ರಾಜ್ಯ ಸಂಚಾರಕ್ಕೆ ರಾಜ್ಯ ಸರ್ಕಾರ ಕಂಪ್ಲೀಟ್​​ ಬ್ರೇಕ್​ ಹಾಕಿದೆ. ಅಗತ್ಯ ವಸ್ತುಗಳ ಸರಕು ಸಾಗಾಟಕ್ಕೆ ಮಾತ್ರ ಅವಕಾಶ ನೀಡಿದೆ. ಇದರ ಜೊತೆ ಸ್ಪಾ, ಎಲ್ಲಾ ರೀತಿಯ ಮನೋರಂಜನಾ ಕೇಂದ್ರಗಳು, ಪಾರ್ಕ್​​ಗಳು ಬಂದ್​​ಗೆ ಮಾರ್ಗಸೂಚಿ ಹೊರಡಿಸಲಾಗಿದೆ.
ರಾಜ್ಯಾದ್ಯಂತ ಎಲ್ಲಾ ಧಾರ್ಮಿಕ ಸ್ಥಳಗಳಿಗೂ ನಿರ್ಬಂಧವೇರಲಾಗಿದೆ. ದೇವಸ್ಥಾನಗಳು, ಚರ್ಚ್​, ಮಸೀದಿಗಳಿಗೆ ಭಕ್ತರು ಭೇಟಿ ನೀಡುವಂತಿಲ್ಲ. ಹೀಗಾಗಲೇ ಜಾತ್ರೆ, ಧಾರ್ಮಿಕ ಮಹೋತ್ಸವಗಳಿಗೆ ಸರ್ಕಾರ ನಿರ್ಬಂಧವೇರಿದ್ದು, ಅದು ಮುಂದುವರೆಯಲಿದೆ. ನಾಳೆಯಿಂದ ಎಲ್ಲಾ ರೀತಿ ರಾಜಕೀಯ ಚಟುವಟಿಗಳು ಬಂದ್​ ಆಗಲಿವೆ. ಯಾವುದೇ ಸಭೆ, ಸಮಾರಂಭಗಳು ನಡೆಯುವಂತಿಲ್ಲ. ಕ್ರೀಡಾ ಚಟುವಟಿಗಳಿಗೂ ಅನುಮತಿ ಇಲ್ಲ ಹಾಗೂ ಸಮುದಾಯ ಭವನಗಳು ಬಂದ್​ ಇರಲಿವೆ.
ಇನ್ನು ಮದುವೆ ಸಮಾರಂಭಗಳಿಗೆ 50 ಜನ, ಅಂತ್ಯಸಂಸ್ಕಾರಕ್ಕೆ 20 ಮಂದಿ, ಕೊರೋನಾದಿಂದ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಐವರು ಮಾತ್ರ ಭಾಗಿಯಾಗಬೇಕು ಎಂಬ ನಿಯಮ ಮುಂದುವರೆಯಲಿದೆ. ಇನ್ನು ಕೃಷಿ ಸಂಬಂಧಿತ ಚಟುವಟಿಗಳಿಗೆ ಅನುಮತಿ ನೀಡಲಾಗಿದೆ. ಗಾರ್ಮೆಂಟ್ಸ್​​ ಹೊರಡುಪಡಿಸಿ ಕೈಗಾರಿಕಾ ಚಟುವಟಿಗಳಿಗೂ ಅನುಮತಿ ನೀಡಲಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ವರ್ಕ್​​ ಫ್ರಮ್​​ ಹೋಂಗೆ ಹೆಚ್ಚು ಒತ್ತು ನೀಡುವಂತೆ ಎಂಎಲ್​ಸಿ ಕಂಪನಿಗಳಿಗೆ ಸೂಚಿಸಲಾಗಿದೆ.
ಮಧ್ಯಾಹ್ನ ಲಾಕ್​ಡೌನ್​ ಘೋಷಿಸಿದ ಸಿಎಂ ಬಿ.ಎಸ್​.ಯಡಿಯೂರಪ್ಪ ತಿಳಿಸಿರುವಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅನುಮತಿ ನೀಡಲಾಗಿದೆ. ಕೇವಲ 4 ಗಂಟೆಗಳ ಕಾಲ ಮಾತ್ರ ಅಗತ್ಯ ವಸ್ತುಗಳಾದ ದಿನಸಿ ಅಂಗಡಿ, ಹಾಲು, ತರಕಾರಿ-ಹಣ್ಣಿನ ಅಂಗಡಿಗಳು, ಮಾಂಸದಂಡಗಿಗಳು ಓಪನ್​ ಇರಲಿವೆ.
ಹೀಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಹಾಲ್​​ ಟಿಕೆಟ್​ ತೋರಿಸಿ ಸಂಚರಿಸಬಹುದು. ಲಾಕ್​ಡೌನ್​ ಹಿನ್ನೆಲೆ ಬೆಂಗಳೂರು ತೊರೆದು ಊರುಗಳಿಗೆ ಹೊರಟ ಜನರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್​ ಸೇವೆಯನ್ನು ಒದಗಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್​ ಸೇವೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಮೂಲಕ ಊರುಗಳಿಗೆ ವಲಸೆ ಹೊರಟ ಜನರಿಗೆ ಸರ್ಕಾರವೇ ಸಾಥ್​ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು