News Karnataka Kannada
Monday, April 22 2024
Cricket
ವಿದೇಶ

100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರ ಸ್ಥಾಪಿಸಲಿರುವ ಭಾರತೀಯ ವಾಯುಪಡೆ

Photo Credit :

100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರ ಸ್ಥಾಪಿಸಲಿರುವ ಭಾರತೀಯ ವಾಯುಪಡೆ

ಬೆಂಗಳೂರು: ಕೋವಿಡ್ ಪಿಡುಗನ್ನು ಎದುರಿಸಲು ದೇಶದೊಂದಿಗೆ ಕೈಜೋಡಿಸಿರುವ ಭಾರತೀಯ ವಾಯುಪಡೆ. ಭಾರತೀಯ ವಾಯುಪಡೆ (ಐಎಎಫ್) 100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರವನ್ನು ಜಾಲಹಳ್ಳಿಯಲ್ಲಿ ತೆರೆಯುವುದಕ್ಕೆ ನಿರ್ಧರಿಸಿದೆ.

 

ಕಮಾಂಡ್ ಆಸ್ಪತ್ರೆ ವಾಯುಪಡೆಯಿಂದ ಒದಗಿಸಲಾದ ತಜ್ಞರು, ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಂದ ಈ ಕೇಂದ್ರ ಕಾರ್ಯನಿರ್ವಹಣೆ ಮಾಡಲಿದೆ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ನೋಡಲ್ ಅಧಿಕಾರಿಗಳ ಮೂಲಕ ಸಮನ್ವಯದ ಮೂಲಕ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ಬೆಂಗಳೂರಿನಲ್ಲಿರುವ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದರು. 

 

ಇನ್ನು, ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಹೊಂದಿರುವ 20 ಬೆಡ್ ಗಳು ಮೇ.6 ರಿಂದ ಕಾರ್ಯಾರಂಭ ಮಾಡಲಿದ್ದು, ರಾಜ್ಯ ಸರ್ಕಾರದಿಂದ ಆಕ್ಸಿಜನ್ ಲಭ್ಯತೆಯನ್ನು ಖಾತರಿಪಡಿಸಿಕೊಂಡು ಉಳಿದ 80 ಬೆಡ್ ಗಳು ಮೇ.20 ರ ವೇಳೆಗೆ ಕಾರ್ಯನಿರ್ವಹಣೆ ಮಾಡಲಿವೆ. 100 ಬೆಡ್ ಗಳ ಪೈಕಿ 10 ಐಸಿಯು ಬೆಡ್ ಗಳು ಹಾಗೂ 40 ಬೆಡ್ ಗಳು ಪೈಪ್ಡ್ ಆಕ್ಸಿಜನ್ ಗಳನ್ನು ಹೊಂದಿರಲಿದ್ದು, ಉಳಿದ 50 ಬೆಡ್ ಗಳು ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನ್ನು ಹೊಂದಿರಲಿವೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು