News Karnataka Kannada
Sunday, April 21 2024
Cricket
ವಿದೇಶ

1 ಲಕ್ಷ ಸೋಂಕಿತರಿಗೆ ಉಚಿತವಾಗಿ ಕೊರೊನಿಲ್ ಔಷಧಿ ಹಂಚಿದ ಹರಿಯಾಣ ಸರ್ಕಾರ

Photo Credit :

1 ಲಕ್ಷ ಸೋಂಕಿತರಿಗೆ ಉಚಿತವಾಗಿ    ಕೊರೊನಿಲ್ ಔಷಧಿ ಹಂಚಿದ ಹರಿಯಾಣ ಸರ್ಕಾರ

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬಾಬಾ ರಾಮ್‍ದೇವ್ ಅವರ ಪಂತಂಜಲಿ ಆಯುರ್ವೇದದ ಕೊರೊನಿಲ್ ಕೊರೊನಾ ಔಷಧಿ ಕುರಿತು ಹೇಳಿದ ಬೆನ್ನಲ್ಲೇ ಇದೀಗ ಹರಿಯಾಣದಲ್ಲಿ 1 ಲಕ್ಷ ಔಷಧಿ ಕಿಟ್‍ಗಳನ್ನು ಕೊರೊನಾ ಸೋಂಕಿತರಿಗೆ ಉಚಿತವಾಗಿ ಹಂಚಲಾಗಿದೆ.
ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೊರೊನಾ ಸೋಂಕಿತರು ಬೇಗ ಗುಣಮುಖರಾಗಲಿ ಎಂಬ ಉದ್ದೇಶದಿಂದ ಪತಂಜಲಿ ಆಯುರ್ವೇದದ ಕೊರೊನಿಲ್ ಔಷಧಿಯ 1 ಲಕ್ಷ ಕಿಟ್‍ಗಳನ್ನು ಕಿಟ್‍ಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಈ ಕಿಟ್‍ಗಳ ಅರ್ಧದಷ್ಟು ವೆಚ್ಚವನ್ನು ಪತಂಜಲಿ ಹಾಗೂ ಉಳಿದ ಅರ್ಧ ವೆಚ್ಚವನ್ನು ಸರ್ಕಾರದ ‘ಕೋವಿಡ್ ರಿಲೀಫ್ ಫಂಡ್’ ನಿಂದ ಭರಿಸಲಾಗುತ್ತಿದೆ ಎಂದು ಅವರು ಹೇಳಿದರು. ಹರಿಯಾಣದಲ್ಲಿನ ಕೋವಿಡ್ ಸೋಂಕಿತರಿಗೆ 1 ಲಕ್ಷ ಕೊರೊನಿಲ್ ಕಿಟ್‍ಗಳನ್ನು ಉಚಿತವಾಗಿ ಹಂಚಲಾಗಿದೆ. ಇದರ ಅರ್ಧದಷ್ಟು ಹಣವನ್ನು ಪತಂಜಲಿ ಭರಿಸಿದೆ, ಉಳಿದ ಅರ್ಧ ಹಣವನ್ನು ಸರ್ಕಾರದ ಕೋವಿಡ್ ರಿಲೀಫ್ ಫಂಡ್‍ನಿಂದ ಭರಿಸಲಾಗಿದೆ ಎಂದು ತಿಳಿಸಿದರು. ಕಿಟ್‍ನಲ್ಲಿ 3 ರೀತಿಯ ಔಷಧಿ ಇದ್ದು, ಕೊರೊನಿಲ್ ಮಾತ್ರೆಗಳು, ಸ್ವಾಸರಿ ವಾತಿ ಹಾಗೂ ಅನು ತೈಲವನ್ನು ಒಳಗೊಂಡಿದೆ. ಬಾಬಾ ರಾಮ್‍ದೇವ್ ಅವರು ಕೊರೊನಾ ಮೊದಲ ಅಲೆ ಪೀಕ್‍ನಲ್ಲಿದ್ದಾಗ ಜೂನ್ 23ರಂದು ಆಯುರ್ವೇದ ಔಷಧಿಯಾದ ಕೊರೊನಿಲ್‍ನ್ನು ಪರಿಚಯಿಸಿದ್ದರು. ಈ ವೇಳೆ ಭಾರೀ ಚರ್ಚೆ ನಡೆದಿತ್ತು.
ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯದ 8 ಜಿಲ್ಲೆಗಳಲ್ಲಿ ಪ್ರೆಷರ್ ಸ್ವಿಂಗ್ ಅಡ್ಸಪ್ರ್ಷನ್ ಆಕ್ಸಿಜನ್ ಪ್ಲಾಂಟ್‍ಗಳನ್ನು ನಿರ್ಮಿಸಲಾಗುತ್ತಿದೆ. ಈ ಕೆಲಸವನ್ನು ಡಿಆರ್‍ಡಿಒಗೆ ವಹಿಸಿದ್ದು, ಜೂನ್ 30ರೊಳಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು