ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಕಿನ್ನೌರ್–ಕಾಜಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕೊ ಸಮೀಪ ಇಂದು ಭೂಕುಸಿತ ಉಂಟಾದ ಪರಿಣಾಮ ಸಂಚಾರ ಸ್ಥಗಿತವಾಗಿದೆ. ಪರಿಣಾಮ ಜನರು ಸಿಕ್ಕಿಬಿದ್ದಿದ್ದು ಸಮಸ್ಯೆಯನ್ನ ಎದುರಿಸುವಂತಾಗಿದೆ.
ಲಾಹೌಲ್–ಸ್ಪಿತಿ ಜಿಲ್ಲೆಗೆ ಸಂಪರ್ಕ ಕಲ್ಪಿಸಿ ಕೊಡುವ ರಸ್ತೆ ಇದಾಗಿದ್ದು, ಭೂಕುಸಿತ ಮತ್ತು ಹಿಮಪಾತದಿಂದಾಗಿ ಇತರೆ ಗ್ರಾಮದ ಜೊತೆ ಸಂಪರ್ಕ ಕಳೆದುಕೊಂಡಿವೆ. ಪರಿಣಾಮ ರಸ್ತೆಯ ಎರೆಡು ಕಡೆ ರಸ್ತೆಯಲ್ಲಿ ಹಲವಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಗಡಿ ರಸ್ತೆ ಸಂಘಟನೆಯ (ಬಿಆರ್ಒ) ಸಿಬ್ಬಂದಿ ಪರಿಸ್ಥಿತಿಯನ್ನ ಸುಧಾರಿಸಲು ಯತ್ನಿಸುತ್ತಿದ್ದಾರೆ.