Categories: ವಿದೇಶ

ಹರಕೆ ಮುಡಿ ಕೂದಲು ; ದೇವಾಲಯದ್ದು ಎಂದ ಕೋರ್ಟ್‌

ಮೈಸೂರು: ಹರಕೆ ಮುಡಿ ಕೂದಲು ಪ್ರಕರಣ ಸಂಬಂಧ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಪರ ತಿ.ನರಸೀಪುರ ಸಿವಿಲ್ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು ಬಂದಿದೆ.
ಹರಕೆ ಮುಡಿ ಕೂದಲು ತೆಗೆಯುವ ಹಾಗೂ ಮುಡಿ ಕೂದಲಿನ ಸಂಪೂರ್ಣ ಹಕ್ಕು ತಮ್ಮದೇ ಎಂದು ನಯನಜಕ್ಷತ್ರಿಯ ಸಂಘ ದಾವೆ ಹೂಡಿತ್ತು. ಕೂದಲಿನ‌ ಸಂಪೂರ್ಣ ಹಕ್ಕು ದೇವಾಲಯಕ್ಕೆ ಸೇರಿದ್ದು ಎಂದು ದೇವಾಲಯದ ಆಡಳಿತ ಮಂಡಳಿ ಪ್ರತಿಪಾದಿಸಿತ್ತು.
25 ವರ್ಷಗಳಿಂದ ನಡೆಯುತ್ತಿದ್ದ ಹರಕೆ ಮುಡಿ ಕೂದಲು ಪ್ರಕರಣದ ವಾದ-ವಿವಾದಕ್ಕೆ ಅಂತಿಮ ತೆರೆ ಬಿದ್ದಿದ್ದು, ಇನ್ಮುಂದೆ ಮುಡಿ ಕೂದಲಿನ ಸಂಪೂರ್ಣ ಹಕ್ಕು ದೇವಾಲಯದ್ದು. ಮುಡಿ ಕೂದಲು ತೆಗೆಯುವ ಕಾರ್ಯ ಮಾತ್ರ ನಯನಜಕ್ಷತ್ರಿಯ ಸಂಘಕ್ಕೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮುಡಿ ಕೂದಲಿನ ಸಂಪೂರ್ಣ ಹಕ್ಕಿನಿಂದ ದೇವಾಲಯಕ್ಕೆ ಮತ್ತಷ್ಟು ಆದಾಯ ಹೆಚ್ಚಲಿದೆ. ಕೇವಲ ಮುಡಿ ತೆಗೆಯುವುದರಿಂದ ನಮ್ಮ ಬದುಕು ಹಸನಾಗುವುದಿಲ್ಲ. ಕೂದಲಿನಿಂದ ಬರುವ ಆದಾಯದಲ್ಲಿ ಇದರಿಂದ ಬರುವ ಆದಾಯದಲ್ಲಿ ಅನಾದಿಕಾಲದಿಂದಲೂ ಪ್ರತಿ ವರ್ಷ ದೊಡ್ಡಜಾತ್ರೆ ,ಚಿಕ್ಕಜಾತ್ರೆ ಗಿರಿಜಾ ಕಲ್ಯಾಣ ಕಾರ್ತಿಕ ಮಾಸಗಳಲ್ಲಿ ವಿವಿಧ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ದೇವಾಲಯದ ಪರ ತೀರ್ಪು ಬಂದಿರುವ ವಿಚಾರ ನಮಗೆ ಅಷ್ಟಾಗಿ ತಿಳಿದಿಲ್ಲ. ನಾವು ಕೂಡ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದ್ದಾರೆ

Desk

Recent Posts

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

33 seconds ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

41 mins ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

53 mins ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

1 hour ago

ಹಾಸನ ವಿಡಿಯೋ ಪ್ರಕರಣ: ಡಿ.ಕೆ. ಶಿವಕುಮಾರ್‌ ಪಿತೂರಿ ಇದೆ ಎಂದ ಎಚ್‌.ಡಿ. ಕುಮಾರಸ್ವಾಮಿ

ಹಾಸನ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪಿತೂರಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…

2 hours ago

ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

2 hours ago