News Karnataka Kannada
Monday, April 29 2024
ವಿದೇಶ

ವಲಸಿಗರ ವೀಸಾದ ಕಾಲಾವಧಿಯನ್ನು ವಿಸ್ತರಿಸಿದ ಅಮೆರಿಕ ಸರ್ಕಾರ

America
Photo Credit :

ಅಮೆರಿಕ ಸರ್ಕಾರವು ವಲಸಿಗರ ವೀಸಾದ ಕಾಲಾವಧಿಯನ್ನು ವಿಸ್ತರಿಸಿದೆ. ಈ ಮೂಲಕ ಗ್ರೀನ್ ಕಾರ್ಡ್‌ಗಳನ್ನು ಬಯಸುವವರು ಮತ್ತು ಪತಿ-ಪತ್ನಿಯ ಎಚ್​​-1ಬಿ ವೀಸಾ ಸೇರಿ ಕೆಲ ವಲಸಿಗರಿಗೆ ಕೆಲಸದ ಪರವಾನಗಿಯನ್ನು ಹೆಚ್ಚುವರಿ 18 ತಿಂಗಳವರೆಗೆ ಬಳಸಲು ಅನುಮತಿಸಲಾಗಿದೆ.

ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರಿಗೆ ಅನುಕೂಲವಾಗಿದೆ. ಜೋ ಬೈಡನ್ ಸರ್ಕಾರದ ಈ ಘೋಷಣೆಯ ಇಂದಿನಿಂದಲೇ (ಮೇ 4) ಜಾರಿಗೆ ಬಂದಿದೆ. ಹೆಚ್ಚುವರಿ 180 ದಿನಗಳೊಂದಿಗೆ ಈ ಕಾರ್ಡ್​​ಗಳ ಅವಧಿ 540 ದಿನಗಳಿಗೆ ಸ್ವಯಂಪ್ರೇರಿತವಾಗಿ ವಿಸ್ತರಣೆಯಾಗಲಿದೆ ಎಂದು ಗೃಹ ಭದ್ರತೆ ಇಲಾಖೆ ಹೇಳಿದೆ.

ಅಮೆರಿಕದ ಈ ಕ್ರಮದಿಂದ ಸುಮಾರು 87,000 ವಲಸಿಗರಿಗೆ ತಕ್ಷಣಕ್ಕೆ ಅನುಕೂಲವಾಗಿದೆ. 30 ದಿನಗಳಲ್ಲಿ ಕಾರ್ಡ್​​​ ಅವಧಿ ಮುಗಿಯುವುದು ತಪ್ಪಲಿದೆ. ಅಲ್ಲದೇ, ಒಟ್ಟಾರೆಯಾಗಿ 4.20 ಲಕ್ಷ ಜನರಿಗೆ ಇದರಿಂದ ಸಹಾಯವಾಗಲಿದೆ.

ಗ್ರೀನ್ ಕಾರ್ಡ್ ಅಂದರೆ ಅಧಿಕೃತವಾಗಿ ಅನುಮತಿ ವಾಸದ ಕಾರ್ಡ್​​ ಎಂದೇ ಕರೆಯಲ್ಪಡುತ್ತದೆ. ಇದು ವಲಸಿಗರಿಗೆ ನೀಡಲಾದ ದಾಖಲೆಯಾಗಿದ್ದು, ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸುವ ಸವಲತ್ತು ನೀಡಲಾಗಿದೆ ಎಂಬುದಕ್ಕೆ ಇದು ಒಂದು ಸಾಕ್ಷಿ ಅಥವಾ ದಾಖಲೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು