Categories: ವಿದೇಶ

ವಧು-ವರರಿಬ್ಬರೂ ಪರಸ್ಪರ ತಾಳಿ ಕಟ್ಟಿಕೊಂಡ ಫೋಟೋ ವೈರಲ್; ಸ್ತ್ರೀ ಸಮಾನತೆ ಎಂದ ವರ

ಹೆಣ್ಣು ಹಾಗೂ ಗಂಡಿನ ನಡುವೆ ಸಮಾನತೆ ಇರಬೇಕು ಎಂದು ಹಲವಾರು ಮಂದಿ ಹೇಳುತ್ತಾರೆ. ಹಾಗೂ ಈ ಸಮಾನತೆಯನ್ನು ಪ್ರತಿಪಾದಿಸಲು ಅನೇಕ ಕೆಲಸಗಳನ್ನು ಮಾಡುತ್ತಾರೆ. ಆದರೆ ಮದುವೆಯ ರೀತಿ ರಿವಾಜುಗಳಲ್ಲು ಸಮಾನತೆಯನ್ನು ಕಾಣುವವರು ಕೆಲವೇ ಕೆಲವು ಮಂದಿ.

 

ಹೌದು, ಮದುವೆಯಲ್ಲಿ ವಧು-ವರರಿಬ್ಬರೂ ಪರಸ್ಪರ ಹಾರ ಬದಲಿಸಿಕೊಳ್ಳುತ್ತಾರೆ ಹೊರತು ಮಂಗಲಸೂತ್ರವನ್ನು ಪರಸ್ಪರರಿಗೆ ಕಟ್ಟಿಕೊಳ್ಳುವುದಿಲ್ಲ. ಆದರೆ ಇಲ್ಲೊಂದು ಜೋಡಿ ಮಂಗಲಸೂತ್ರವನ್ನೂ ಪರಸ್ಪರರು ಕಟ್ಟಿಕೊಂಡಿದ್ದಾರೆ. ಅಂದರೆ ವಧು ಮಾತ್ರವಲ್ಲ ವರನಿಗೂ ಮಂಗಲಸೂತ್ರ ಧಾರಣೆಯಾಗಿದೆ. 

 

ಇದೊಂದು ವಿಭಿನ್ನ ಮದುವೆ. ಯಾಕೆ ಹುಡುಗಿಯವರು ಮಾತ್ರ ಮಂಗಲಸೂತ್ರ ಕಟ್ಟಿಕೊಳ್ಳಬೇಕು ಎಂಬುದು ವರನ ವಾದ. ಇಂತಹ ವಿಚಿತ್ರವಾಗಿ ಮದುವೆಯಾಗಿರುವ ಜೋಡಿ ತನುಜಾ ಮತ್ತು ಶಾರ್ದೂಲ್​. 

 

ಶಾರ್ದೂಲ್​ರ ಈ ನಿರ್ಧಾರದಿಂದ ಮನೆಯವರು, ಸಂಬಂಧಿಕರೆಲ್ಲ ಅಚ್ಚರಿಗೆ ಒಳಗಾಗುತ್ತಾರೆ. ಮಹಿಳಾ ಸಮಾನತೆಯನ್ನು ನಂಬಿಕೊಂಡು ಬಂದಿರುವ ನಾನು ಮಂಗಲಸೂತ್ರ ಧರಿಸುವವನೇ ಎಂದು ಪಟ್ಟುಹಿಡಿಯುತ್ತಾರೆ. ಯಾರು ಏನೇ ಹೇಳಿದರೂ ಕೇಳುವುದಿಲ್ಲ. ಅಷ್ಟೇ ಅಲ್ಲ, ಕೆಲವು ಸಂಪ್ರದಾಯದ ಪ್ರಕಾರ ವಧುವಿನ ಮನೆಯವರೇ ಮದುವೆಯ ಎಲ್ಲ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಆದರೆ ಶಾರ್ದೂಲ್​ ಅದರಲ್ಲೂ ದೊಡ್ಡತನ ತೋರುತ್ತಾರೆ. ತನುಜಾ ಮನೆಗೆ ಹೋಗಿ, ವಿವಾಹದ ಎಲ್ಲ ಖರ್ಚನ್ನೂ ವಿಭಜಿಸಿಕೊಳ್ಳೋಣ ಎಂದು ಹೇಳುತ್ತಾರೆ.

 

ಇವರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಂತೂ ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ಸೀರೆ ಉಟ್ಟೇ ಕುಳಿದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ. ಆದರೆ ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಇವತ್ತಿಗೂ ಟ್ರೋಲ್ ಆಗುತ್ತಿದ್ದೇವೆ. ಅದೇನೂ ಸಮಸ್ಯೆಯಿಲ್ಲ. ನನಗೆ ಹೆಣ್ಣುಮಕ್ಕಳ ಮನಸು ಅರ್ಥವಾಗುತ್ತದೆ. ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ ಎಂದು ಶಾರ್ದೂಲ್ ಹೇಳಿದ್ದಾರೆ. ಇವರ ಮದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದು ತನುಜಾ ಕೈಯ್ಯಲಿ ಕಟ್ಟಿಸಿಕೊಂಡ ತಾಳಿಯನ್ನು ಇಂದಿಗೂ ಶಾರ್ದೂಲ್ ತೆಗೆದಿಲ್ಲ.

 

 

 

 

Desk

Recent Posts

ಅರವಿಂದ್ ಕೇಜ್ರಿವಾಲ್ ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ…

10 mins ago

ಚಾಮರಾಜನಗರದಲ್ಲಿ ಉಡ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳನ್ನು ಜೀವಂತವಾಗಿ ಸೆರೆ ಹಿಡಿದು ಸಾಗಾಟ ಮಾಡುವ ಜಾಲ ಕಾರ್ಯಾಚರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣಿಗಳನ್ನು ಬೇಟೆಯಾಡಿ ಮಾಂಸ…

22 mins ago

ಮೈಸೂರಿನಲ್ಲಿ ಪರಶುರಾಮ ಜಯಂತಿ ಕಾರ್ಯಕ್ರಮ

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ‌ ಜಯಂತಿ ಅಂಗವಾಗಿ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಪರಶುರಾಮ ಜಯಂತಿಯನ್ನು…

32 mins ago

ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು

ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

43 mins ago

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

1 hour ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

1 hour ago