ಮಾಸ್ಕೋದ ಪರ್ಮ್ ರಾಜ್ಯ ವಿಶ್ವವಿದ್ಯಾಲಯದಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಎಂಟು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ 28 ಮಂದಿ ಗಾಯಗೊಂಡಿದ್ದಾರೆ.
ಬಂದೂಕುಧಾರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಆತನನ್ನು ಬಂಧಿಸಲಾಗಿದೆ.
ಆತ ಯಾರು? ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಿದ ಎನ್ನುವುದು ತಿಳಿದಿಲ್ಲ. ಗುಂಡಿನ ದಾಳಿ ಹಿನ್ನೆಲೆ ಜೀವರಕ್ಷಣೆಗೆ ವಿದ್ಯಾರ್ಥಿಗಳು ಎರಡನೇ ಅಂತಸ್ತಿನಿಂದ ಹಾರಿದ್ದಾರೆ.
ಕಪ್ಪು ವಸ್ತ್ರ, ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಒಳನುಗ್ಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಷ್ಯಾದಲ್ಲಿ ಶಸ್ತ್ರಾಸ್ತ್ರ ಹೊಂದುವುದು ಸುಲಭದ ಮಾತಲ್ಲ, ಬೇಟೆಯಾಡುವವರು ಮಾತ್ರ ಲೈಸೆನ್ಸ್ ಗನ್ ಹೊಂದಿರುತ್ತಾರೆ. ಶಂಕಿತನ ಬಳಿ ಆಕ್ಷನ್ ಶಾಟ್ಗನ್ ಇರುವ ಶಂಕೆ ಇದೆ. ಈ ವೇಳೆ ಕ್ಯಾಂಪಸ್ನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳಿದ್ದು, ಸಿಕ್ಕಸಿಕ್ಕವರ ಮೇಲೆ ವ್ಯಕ್ತಿ ದಾಳಿ ಮಾಡಿದ್ದಾನೆ.