Categories: ವಿದೇಶ

ಮಾನವೀಯತೆ ದೃಷ್ಟಿಯಿಂದ ನಿಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ ‘ಪುಟಿನ್‌ಗೆ ವಿಶ್ವಸಂಸ್ಥೆ ಮನವಿ

ವಿಶ್ವಸಂಸ್ಥೆ: ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಮಾನವೀಯತೆಯ ದೃಷ್ಟಿಯಿಂದ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ‘ರಷ್ಯಾ ಅಧ್ಯಕ್ಷ ಪುಟಿನ್ ಅವರೇ, ಮಾನವೀಯತೆ ದೃಷ್ಟಿಯಿಂದ ನಿಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ’ ಎಂದು ಅವರು ಮನವಿ ಮಾಡಿದ್ದಾರೆ.

ಭದ್ರತಾ ಮಂಡಳಿಯ ತುರ್ತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ನನ್ನ ಅವಧಿಯಲ್ಲಿ ಇಂದು ಅತ್ಯಂತ ದುಃಖದ ದಿನ ಎಂದು ಬಣ್ಣಿಸಿದರು.

‘ಮಾನವೀಯತೆಯ ದೃಷ್ಟಿಯಿಂದ, ಶತಮಾನದ ಆರಂಭದಿಂದಲೂ ನಡೆಯದ ಅತ್ಯಂತ ಕೆಟ್ಟ ಯುದ್ಧವನ್ನು ಯುರೋಪಿನಲ್ಲಿ ಪ್ರಾರಂಭಿಸಲು ಅನುಮತಿಸಬೇಡಿ’ಎಂದು ಅವರು ಹೇಳಿದ್ದಾರೆ.

ಉಕ್ರೇನ್ ವಿರುದ್ಧ ಪುಟಿನ್ ಯುದ್ಧ ಘೋಷಣೆಯ ಬೆನ್ನಲ್ಲೇ ರಾಜಧಾನಿ ಕೈವ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಸುತ್ತಿದೆ.

Swathi MG

Recent Posts

ಹಣ್ಣಕ್ಕೆ ಬೇಡಿಕೆ ಇಟ್ಟು ಮರ್ಮಾಂಗಕ್ಕೆ ವಿದ್ಯುತ್​ ಶಾಕ್​ ನೀಡಿ ಚಿತ್ರಹಿಂಸೆ

ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ…

4 seconds ago

ಮಾಜಿ ಸಿಎಂ ಎಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ: ಕಾಂಗ್ರೆಸ್​ ಶಾಸಕ

ಹೆಚ್​ಡಿ ರೇವಣ್ಣರಂತೆ ಮಾಜಿ ಸಿಎಂ ಹೆಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಅವರು…

12 mins ago

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

31 mins ago

ಕ್ರಿಕೆಟ್ ಪಂದ್ಯದ ವೇಳೆ 21 ವರ್ಷದ ಯುವಕನನ್ನು ಥಳಿಸಿ ಹತ್ಯೆ

ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…

33 mins ago

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…

47 mins ago

ಕೈ ತಪ್ಪಿದ ವಿಧಾನಪರಿಷತ್ ಟಿಕೆಟ್: ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾ‌ನ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…

1 hour ago