Categories: ವಿದೇಶ

ಭಿಕ್ಷೆ ಬೇಡಿ ಎರಡು ವರ್ಷ ಕೂಡಿಟ್ಟ ಹಣದಿಂದ ಮಗಳಿಗೆ ಬಟ್ಟೆ ಕೊಡಿಸಿದ ತಂದೆ!

ಕೊಲ್ಕೊತ್ತಾ: ಭಿಕ್ಷುಕ ತಂದೆಯೊಬ್ಬ ತಾನು ಎರಡು ವರ್ಷ ಕೂಡಿಟ್ಟ ಹಣದಿಂದ ತನ್ನ ಮುದ್ದಿನ ಮಗಳಿಗೆ ಬಟ್ಟೆ ಕೊಡಿಸಿದ್ದಾನೆ. ಮಗಳಿಗೆ ಹೊಸ ಬಟ್ಟೆ ತೊಡಿಸಿ ಫೋಟೋ ಕ್ಲಿಕ್ಕಿಸಿ ಅಪ್ಪ ಮಗಳು ಸಂಭ್ರಮಿಸುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.

ಈತನ ಹೆಸರು ಎಂ.ಡಿ ಕವ್ಸಾರ್ ಹುಸೇನ್, ವೃತ್ತಿಯಲ್ಲಿ ಈತ ಬಿಕ್ಷುಕ. ಹತ್ತು ವರ್ಷದ ಹಿಂದೆ ಸಂಭವಿಸಿದ ಅಪಘಾತದಿಂತ ಈತ ತನ್ನ ಬಲಗೈ ಕಳೆದುಕೊಂಡ. ಕುಟುಂಬದ ಜವಾಬ್ದಾರಿ ಈತನ ಮೇಲೆ ಬಿದ್ದಿದ್ದು, ಕೆಲಸ ಸಿಗದ ಪರಿಣಾಮ ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ತನ್ನ ಸಂಸಾರ ನಡೆಸುತ್ತಿದ್ದಾನೆ. ಕಳೆದ ಎರಡು ವರ್ಷಗಳಿಂದ ಪ್ರತಿ ನಿತ್ಯ ತಾನು ಭಿಕ್ಷೆ ಬೇಡಿದ ಹಣದಲ್ಲಿ ಒಂದೊಂದು ರೂಪಾಯಿಯನ್ನು ಕೂಡಿಟ್ಟು ಕಡೆಗೂ ತನ್ನ ಮಗಳಿಗೆ ಹೊಸ ಬಟ್ಟೆ ಕೊಡಿಸಿದ್ದಾನೆ.

ಎರಡು ವರ್ಷಗಳ ಕಾಲ ಕೂಡಿಟ್ಟ ಹಣದಲ್ಲಿ ನಿನ್ನೆಯಷ್ಟೇ ನನ್ನ ಮಗಳಿಗೆ ಒಂದು ಹೊಸ ಬಟ್ಟೆಯನ್ನು ಕೊಡಿಸಿದೆ. ನನ್ನ ಹೆಂಡತಿಗೆ ತಿಳಿಯದೇ ಹಾಗೆ ಪಕ್ಕದ ಮನೆಯವರಿಂದ ಮೊಬೈಲ್ ತಂದು ನನ್ನ ಮಗಳ ಫೋಟೋಗಳನ್ನು ತೆಗೆದಿದ್ದೇನೆ, ನಮ್ಮ ಬಳಿ ಅವಳ ಒಂದು ಫೋಟೋವು ಇಲ್ಲ, ಬಟ್ಟೆ ಕೊಳ್ಳಲು ಅಂಗಡಿಗೆ ತೆರಳಿದಾಗ ನಾನು ಕೊಟ್ಟ ಮುದುಡಿದ ನೋಟುಗಳನ್ನು ಕಂಡ ಅಂಗಡಿ ಮಾಲೀಕ, ನೀನು ಭಿಕ್ಷುಕನೇ ಎಂದು ಕೇಳಿ ನನ್ನನ್ನು ಅಂಗಡಿಯಿಂದ ಹೊರದಬ್ಬಿದ. ಆಗ ಗಾಬರಿಗೊಂಡ ಮಗಳು ಅಳುತ್ತಾ ನನ್ನ ಕೈ ಹಿಡಿದು ನನಗೆ ಯಾವುದೇ ಬಟ್ಟೆ ಬೇಡ ಎಂದು ಅಂಗಡಿಯಿಂದ ನನ್ನನ್ನು ಹೊರಗೆ ಕರೆದುಕೊಂಡು ಬಂದಳು.
ಹತ್ತು ವರ್ಷಗಳ ಹಿಂದೆ ನಡೆದ ಅಪಘಾತದಿಂದ ನನಗೆ ಈ ಪರಿಸ್ಥಿತಿ ಎದುರಾಗುತ್ತದೆ, ಬೇರೆಯವರ ಮುಂದೆ ಭಿಕ್ಷೆ ಬೇಡಿ ಜೀವನ ನಡೆಸುವ ಸ್ಥಿತಿ ತಲುಪುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನನ್ನ ಒಂದು ಕೈ ಇಲ್ಲದಿರುವುದನ್ನು ನೋಡಿ ನನ್ನ ಚಿಕ್ಕ ಮಗ, ಅಪ್ಪಾ ನಿನ್ನ ಇನ್ನೊಂದು ಕೈ ಅನ್ನು ಎಲ್ಲಿ ಬಿಟ್ಟು ಬಂದಿದ್ದೀಯಾ ಎಂದು ಕೇಳುತ್ತಾನೆ. ಒಂದೇ ಕೈಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಅರಿತಿರುವ ನನ್ನ ಮಗಳು ಸುಮಯ್ಯಾ ನಿತ್ಯ ನನಗೆ ಊಟ ಮಾಡಿಸುತ್ತಾಳೆ. ನನ್ನ ಮಗಳನ್ನು ಸಿಗ್ನಲ್ ನಲ್ಲಿ ನಿಲ್ಲಿಸಿ ನಾನು ಭಿಕ್ಷೆ ಬೇಡಲು ಹೋಗುತ್ತೇನೆ, ದೊಡ್ಡ ದೊಡ್ಡ ಕಾರು, ಬಸ್ ಬಂದು ನನಗೆ ಡಿಕ್ಕಿ ಹೊಡೆಯಬಹುದೆಂಬ ಭಯದಲ್ಲಿ ಆಕೆ ಯಾವತ್ತೂ ನನ್ನನ್ನು ಒಂಟಿಯಾಗಿ ಬಿಡುವುದಿಲ್ಲ, ಸ್ವಲ್ಹ ಹಣ ಸಂಪಾದಿಸಿ ನಾನು ನನ್ನ ಮಗಳ ಜೊತೆ ಮನೆಗೆ ಮರಳುತ್ತೇನೆ, ಒಂದೊಂದು ದಿನ ಹಣ ಸಿಗುವುದೇ ಇಲ್ಲ, ಆವತ್ತಿನ ರಾತ್ರಿ ನಾನು ಸಾಯಬೇಕು ಎಂದು ಯೋಚಿಸುತ್ತೇನೆ, ಆದರೆ ನನ್ನ ಮಕ್ಕಳು ನನ್ನನ್ನು ತಬ್ಬಿಕೊಂಡು ಮಲಗಿರುವಾಗ ಸಾಯಲು ಮನಸಾಗುವುದಿಲ್ಲ ಎಂದು ಮನಸ್ಸಿನ ನೋವನ್ನು ಬಿಚ್ಚಿಟ್ಟಿದ್ದಾರೆ.

 

Desk

Recent Posts

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

16 mins ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

43 mins ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

58 mins ago

ಪಂಜಾಬ್​​ ವಿರುದ್ಧ ಹೈದರಾಬಾದ್ ಜಯಬೇರಿ : ಪ್ಲೇ ಆಫ್​​ನಲ್ಲಿ ಆರ್​​ಸಿಬಿ ವಿರುದ್ಧ ಕಣಕ್ಕೆ

ಇಂದು ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್​​​ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ಗೆದ್ದು…

1 hour ago

ಮಹಿಳೆಯ ಕಿಡ್ನಿಯಲ್ಲಿತ್ತು 300 ಕಲ್ಲು: ಬೆಚ್ಚಿಬಿದ್ದ ವೈದ್ಯರು

ವೈದ್ಯರು ಮಹಿಳೆಯೊಬ್ಬರ ಮೂತ್ರಪಿಂಡದಿಂದ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಿರಲು ನೀರಿನ ಬದಲು ಪ್ರತೀ ದಿನ…

2 hours ago

ಬಿಜೆಪಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್.ಐ.ಆರ್ ದಾಖಲು

ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್‌ ಪೂಂಜಾ  ಮೇಲೆ ಎಫ್‌ಐಆರ್‌ ದಾಖಲಾಗಿದೆ.ಶಾಸಕರು ತನ್ನ…

2 hours ago