News Karnataka Kannada
Monday, April 29 2024
ವಿದೇಶ

ಭಾರತದ ಗೋಧಿಗೆ ವಿಶ್ವದಲ್ಲಿ ಹೆಚ್ಚಿದ ಬೇಡಿಕೆ: 2022ರಲ್ಲಿ ದಾಖಲೆ ಪ್ರಮಾಣದಲ್ಲಿ ರಫ್ತು!

Wheat
Photo Credit :

2022ರ ಹಣಕಾಸು ವರ್ಷದಲ್ಲಿ ಭಾರತದ ಗೋಧಿ ರಫ್ತು ಗಂಣನೀಯವಾಗಿ ಏರಿಕೆಕಂಡಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಕಡಿಮೆ ಪೂರೈಕೆಯಿಂದಾಗಿ ಭಾರತೀಯ ಗೋಧಿಯ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ.ಜೊತೆಗೆ ಬೆಲೆಯಲ್ಲೂ ಹೆಚ್ಚಳ ಉಂಟಾಗಿದೆ.

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, ಮಾರ್ಚ್ 2022ರ ಹೊತ್ತಿಗೆ, ಭಾರತವು 7.85 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ 2.1 ಮಿಲಿಯನ್ ರಫ್ತುಗಳಿಗಿಂತ ಹೆಚ್ಚಾಗಿದೆ.

ಭಾರತವು ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಶ್ರೀಲಂಕಾ, ಒಮಾನ್ ಮತ್ತು ಕತಾರ್ ಸೇರಿದಂತೆ ಇತರ ಹಲವಾರು ದೇಶಗಳಿಗೆ ಗೋಧಿಯನ್ನು ರಫ್ತು ಮಾಡಿದೆ. ಭಾರತವು ಹೆಚ್ಚಿನ ಗೋಧಿಯನ್ನು ಪ್ರತಿ ಟನ್ʼಗೆ 225 ಡಾಲರ್ʼನಿಂದ 335 ಡಾಲರ್ʼಗೆ ಮಾರಾಟ ಮಾಡಿದೆ.

ಗೋಧಿ ರಫ್ತಿಗೆ ಸಂಬಂಧಿಸಿದಂತೆ ಭಾರತದ ಅತಿದೊಡ್ಡ ಗೋಧಿ ಆಮದುದಾರ ಈಜಿಪ್ಟ್ ನೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಗಮನಾರ್ಹವಾಗಿ, ಈಜಿಪ್ಟ್ ವಿಶ್ವದ ಅತಿದೊಡ್ಡ ಗೋಧಿ ಆಮದುದಾರ ರಾಷ್ಟ್ರವಾಗಿದೆ.

ಈ ಹಿಂದೆ ಅವರು ರಷ್ಯಾ ಮತ್ತು ಉಕ್ರೇನ್ ನಿಂದ ಗೋಧಿಯನ್ನು ಖರೀದಿಸುತ್ತಿದ್ದರು. ಆದರೆ, ಯುದ್ಧದ ಕಾರಣದಿಂದಾಗಿ, ಗೋಧಿಯನ್ನು ಅಲ್ಲಿಂದ ಇನ್ನು ಮುಂದೆ ಪೂರೈಸಲಾಗುತ್ತಿಲ್ಲ.ಹೀಗಾಗಿ ಭಾರತದಿಂದ ಗೋಧಿಯನ್ನ ಪಡೆಯಲು ಮಾತುಕತೆ ನಡೆಸುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು