ಕೈರೋ: ಇರಾಕ್’ನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ಮಾಡಿ, ಸ್ಫೋಟಕ ಸಾಧನ ಅಳವಡಿಕೆ ಮಾಡುತ್ತಿದ್ದಾಗ ಸಿಡಿದು ಐವರು ಉಗ್ರರು ಸಾವನ್ನಪ್ಪಿದ್ದಾರೆ.
ಇರಾಕ್ನ ಪಶ್ಚಿಮ ಅಲ್ ಅನ್ಬರ್ ಪ್ರಾಂತ್ಯದ ರುತ್ಬಾ ಪಟ್ಟಣದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು ಅಡಗಿರುವ ಸ್ಥಳದಲ್ಲಿ ಉಗ್ರರ ವಾಹನ ಸ್ಫೋಟಗೊಂಡಿದೆ ಎಂದು ಇರಾಕ್ ಭದ್ರತಾ ಪಡೆ ಹೇಳಿವೆ.
ಸ್ಫೋಟಕ ಸಾಧನವನ್ನು ಅಳವಡಿಸುತ್ತಿದ್ದ ಐದು ಉಗ್ರರು ಹತರಾಗಿದ್ಧಾರೆ. ಒಂದು ವಾರದ ಹಿಂದೆ, ಭದ್ರತಾ ಪಡೆಗಳು ದೇಶಾದ್ಯಂತ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದವು ಎಂದು ಇರಾಕ್ ಮಾಧ್ಯಮ ವರದಿ ಮಾಡಿದೆ.