ನವದೆಹಲಿ: ದೇಶದಲ್ಲಿ ಒಂದು ದಿನದಲ್ಲಿ ಒಟ್ಟು 62 ಸಾವಿರ ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 4.52 ಲಕ್ಷ ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.
ಭಾರತದಲ್ಲಿ ಒಟ್ಟು 119 ಕೋಟಿ ಕೊರೋನಾ ಸೋಂಕಿತರಿದ್ದಾರೆ, ಇದರಲ್ಲಿ 1.12 ಕೋಟಿ ಮಂದಿ ಚೇತರಿಸಿಕೊಂಡಿರುವರು ಹಾಗೂ 1.61 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಒಟ್ಟು 36,902 ಸೋಂಕಿತರು ಶುಕ್ರವಾರ ಒಂದೇ ದಿನ ಪತ್ತೆಯಾಗಿದ್ದಾರೆ. ಸಾಂಕ್ರಾಮಿಕವು ಆರಂಭವಾದ ಬಳಿಕ ಒಂದೇ ದಿನ ಕಂಡುಬಂದ ಗರಿಷ್ಠ ಪ್ರಕರಣಗಳು ಇದಾಗಿವೆ.