Categories: ವಿದೇಶ

ದಕ್ಷಿಣ ಆಫ್ರಿಕಾದಿಂದ ಸಿಂಗಾಪುರಕ್ಕೆ ಬಂದ ಇಬ್ಬರಲ್ಲಿ ಓಮೈಕ್ರಾನ್ ಪತ್ತೆ

ಸಿಂಗಾಪುರ: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರು ಪ್ರಯಾಣಿಕರಿಗೆ ಕೋವಿಡ್ 19ನ ಓಮೈಕ್ರಾನ್ ರೂಪಾಂತರ ತಳಿ ತಗುಲಿರುವುದು ಪ್ರಾಥಮಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಡಿಸೆಂಬರ್ 1 ರಂದು ಸಿಂಗಾಪುರಕ್ಕೆ ಆಗಮಿಸಿದ ಕೂಡಲೇ ಇಬ್ಬರನ್ನೂ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಹಾಗಾಗಿ, ಬೇರೆ ಸಮುದಾಯದ ಜೊತೆ ಸಂವಹನ ನಡೆಸಿಲ್ಲ’ಎಂದು ಸಚಿವಾಲಯವನ್ನು ಉಲ್ಲೇಖಿಸಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.

‘ಈ ಪ್ರಕರಣಗಳಿಂದ ಸಮುದಾಯ ಪ್ರಸರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ’ಎಂದು ಎಂಒಎಚ್‌ ತಿಳಿಸಿದೆ. ಜೋಹಾನ್ಸ್‌ಬರ್ಗ್‌ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಕೇಂದ್ರದ (ಎನ್‌ಸಿಐಡಿ) ಪ್ರತ್ಯೇಕ ವಾರ್ಡ್‌ಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅದು ಹೇಳಿದೆ.

ಸಿಂಗಾಪುರ ಏರ್‌ಲೈನ್ಸ್ (ಎಸ್‌ಐಎ) ಎಸ್‌ಕ್ಯು 479 ವಿಮಾನದಲ್ಲಿ ದಕ್ಷಿಣ ಆಫ್ರಿಕಾದಿಂದ ಸಿಂಗಪುರಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಿಗೆ ಬುಧವಾರ ನಡೆಸಲಾದ ಪರೀಕ್ಷೆಯಲ್ಲಿ ಓಮೈಕ್ರಾನ್ ಪಾಸಿಟಿವ್ ಬಂದಿದೆ ಎಂದು ಸರ್ಕಾರ ತಿಳಿಸಿದೆ.ಇಬ್ಬರೂ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ‘ಕೆಮ್ಮು ಮತ್ತು ಗಂಟಲು ಕೆರೆತದ ಸೌಮ್ಯ ಲಕ್ಷಣಗಳನ್ನು ಅವರು ಹೊಂದಿದ್ದಾರೆ’ಎಂದು ಅದು ಹೇಳಿದೆ.

ಸೋಂಕಿತರಲ್ಲಿ ಒಬ್ಬರು 44 ವರ್ಷ ವಯಸ್ಸಿನ ಸಿಂಗಾಪುರದ ಖಾಯಂ ನಿವಾಸಿಯಾಗಿದ್ದು, ಅವರು ಮೊಜಾಂಬಿಕ್‌ ಮೂಲಕ ಜೋಹಾನ್ಸ್‌ಬರ್ಗ್‌ಗೆ ತೆರಳಿದ್ದರು. ನವೆಂಬರ್ 29 ರಂದು ಅವರು ಮೊಜಾಂಬಿಕಕ್‌ನಿಂದ ತೆರಳುವಾಗ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿತ್ತು ಎಂದು ಸಚಿವಾಲಯವು ತಿಳಿಸಿದೆ.

ಮತ್ತೊಬ್ಬರು 41 ವರ್ಷದ ಸಿಂಗಪುರದ ಮಹಿಳೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದರು. ನವೆಂಬರ್ 29ರಂದು ಜೋಹಾನ್ಸ್‌ಬರ್ಗ್‌ನಿಂದ ತೆರಳುವಾಗ ಅವರ ಕೋವಿಡ್ ವರದಿಯು ನೆಗೆಟಿವ್ ಆಗಿತ್ತು.

Swathi MG

Recent Posts

ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ : ಮೇ 17ಕ್ಕೆ ಮುಂದೂಡಿಕೆ

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಕೈಗೊಂಡಿರುವ ಗಗನಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ

1 min ago

ನ್ಯೂಸ್ ಕರ್ನಾಟಕ ವರದಿಯ ಫಲಶೃತಿ : ಗೋಳೂರು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ತಾಲ್ಲೂಕಿನ ಗೋಳೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ…

14 mins ago

ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು

ಮೊಬೈಲ್‌ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…

40 mins ago

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…

53 mins ago

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

1 hour ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

1 hour ago