Categories: ವಿದೇಶ

ಚೀನಾ : ಲುಝೌ ನಗರದಲ್ಲಿ ಪ್ರಬಲ ಭೂಕಂಪನ ಸಂಭವ, ಇಬ್ಬರು ಮೃತ

ಚೀನಾ : ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಲುಝೌ ನಗರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಇಂದು ಮುಂಜಾನೆ 4.33ರ ವೇಳೆಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ. ಕಂಪನದಿಂದ 35 ಮನೆಗಳು ಕುಸಿದಿದ್ದು, ಇಬ್ಬರು ಮೃತಪಟ್ಟಿದ್ದು, 60 ಮಂದಿ ಗಾಯಗೊಂಡಿದ್ದಾರೆ.

ಈ ಬಗ್ಗೆ ವರದಿ ಮಾಡಿದ ಚೀನಾ ಭೂಕಂಪ ಜಾಲಗಳ ಕೇಂದ್ರ, ಭೂಕಂಪನದ ಕೇಂದ್ರಬಿಂದು 29.2 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 105.34 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ವಿಚಾರಣೆ ಮಾಡಲಾಗಿದ್ದು, 10ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ ಎಂದು ತಿಳಿಸಿದೆ. ಸದ್ಯ 6,904 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು, 200 ಮನೆಗಳು ಬಿರುಕು ಬಿಟ್ಟಿವೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.

Sneha Gowda

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

3 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

3 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

5 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

5 hours ago