ಗುಜರಾತ್ : ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದ ತನ್ನ ಉದ್ದದ ಕೂದಲನ್ನು ಕತ್ತರಿಸಿದ 18 ವರ್ಷದ ಬಾಲಕಿ ನೀಲಾಂಶಿ ಪಟೇಲ್.
ಜುಲೈ 2020 ರಲ್ಲಿ ಕೊನೆಯ ಬಾರಿಗೆ ಕೂದಲನ್ನು ಅಳೆದಾಗ 200 ಸೆಂಟಿಮೀಟರ್ ಉದ್ದವನ್ನು ತಲುಪಿತ್ತು . ಹೀಗಾಗಿ ಜಗತ್ತಿನ ಅತೀ ಉದ್ದದ ಕೂದಲಿರುವ ಬಾಲಕಿ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನೀಡಲಾಗಿತ್ತು .ಆದರೆ ಇದೀಗ 12 ವರ್ಷದ ಬಳಿಕ ನೀಲಾಂಶಿ ತನ್ನ ಕೂದಲನ್ನು ಕತ್ತರಿಸಿದ್ದು, ಕಾಪಿಟ್ಟುಕೊಳ್ಳಲು ಮ್ಯೂಸಿಯಂಗೆ ನೀಡಿದ್ದಾರೆ .
ತನ್ನ ಆರನೇ ವಯಸ್ಸಿನಲ್ಲಿ ಹೇರ್ ಸೆಲೂನ್’ನಲ್ಲಾದ ಅನುಭವದಿಂದ ಕೂದಲನ್ನು ಕತ್ತರಿಸಿರಲಿಲ್ಲ . ಆದರೆ ಇದೀಗ ಆ ಕೂದಲಿಗೆ ಕತ್ತರಿ ಹಾಕಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲದೆ, ಮಗಳೊಂದಿಗೆ ತಾಯಿ ಕಾಮಿನಿಬೇನ್ ಕೂಡ ತಮ್ಮ ಕೂದಲನ್ನು ಕತ್ತರಿಸಿ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದಾರೆ .