News Karnataka Kannada
Monday, April 29 2024
ವಿದೇಶ

ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ತೈಲ ಸೋರಿಕೆ: ಲಕ್ಷಾಂತರ ಪ್ರಾಣಿಗಳ ಮಾರಣಹೋಮ

New Project
Photo Credit :

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿ ತೀರದ ಹಂಟಿಂಗ್ಟನ್ ಸಮುದ್ರದಲ್ಲಿ ಭಾರೀ ಪ್ರಮಾಣದ ತೈಲ ಸೋರಿಕೆಯಾಗಿದೆ.
ಕಡಲ ತೀರದಲ್ಲಿರುವ ಎಲಿ ಹಾಗೂ ಎಲ್ಲೆನ್ ಎನ್ನುವ ಎರಡು ಬೃಹತ್ ಅನಿಲ ಬುಗ್ಗೆಗಳ ಪೈಪ್ ನಿಂದ ತೈಲ ಸೋರಿಕೆಯಾಗುತ್ತಿದೆ. ಇದರಿಂದ ಲಕ್ಷಾಂತರ ಜಲಚರಗಳು, ಪಕ್ಷಿಗಳು ತೈಲದಲ್ಲಿ ಮುಳುಗಿ ಸಾವನ್ನಪ್ಪಿರುವುದು ವರದಿಯಾಗಿದೆ.

ಅನಿಲ ಸೋರಿಕೆ ಬಗ್ಗೆ ಕೋಸ್ಟ್ ಗಾರ್ಡ್ಸ್ ಗಳು ತನಿಖೆ ಕೈಗೆತ್ತಿಕೊಂಡಿದ್ದು, ಪ್ರಾರ್ಥಮಿಕ ಹಂತದ ತನಿಖೆಯ ವರದಿ ಪ್ರಕಾರ ಈವರೆಗೂ ಕನಿಷ್ಠ 1,26,000 ಗ್ಯಾಲಿನ್ ನಷ್ಟು ಎಣ್ಣೆ ಸಮುದ್ರದಲ್ಲಿ ಇದೆ. ಇದು ಕಡಲತೀರದಲ್ಲಿ ಬರೋಬ್ಬರಿ 10 ಮೈಲಿ ದೂರದವರೆಗೆ ಹರಡಿದೆ ಎನ್ನಲಾಗಿದೆ.

ಈ ವೇಳೆ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರನ್ನು ಕಡಲತೀರಕ್ಕೆ ಭೇಟಿ ನೀಡದಂತೆ ಸೂಚನೆ ನೀಡಿದ್ದು, ಜೊತೆಗೆ ಮುಂಗಡವಾಗಿ ನಿಯೋಜನೆಗೊಂಡಿದ್ದ ವಾಯು ಪ್ರದರ್ಶನವನ್ನು ಕೂಡ ರದ್ದು ಮಾಡಿದ್ದಾರೆ.

2007ರಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಸಮುದ್ರದಲ್ಲಿ 53,000 ಗ್ಯಾಲನ್ ಎಣ್ಣೆ ಸೋರಿಕೆಯಾಗಿತ್ತು. ಇದರಿಂದ 6,800 ಪಕ್ಷಿಗಳು ಮೃತಪಟ್ಟಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು