News Karnataka Kannada
Monday, April 29 2024
ವಿದೇಶ

ಕೋವಿಡ್ ನಿಯಮ ಉಲ್ಲಂಘನೆ; ದೆಹಲಿಯಲ್ಲಿ 1,200ಕ್ಕೂ ಹೆಚ್ಚು ಜನರಿಗೆ ದಂಡ

Photo Credit :

ಕೋವಿಡ್ ನಿಯಮ ಉಲ್ಲಂಘನೆ; ದೆಹಲಿಯಲ್ಲಿ 1,200ಕ್ಕೂ ಹೆಚ್ಚು ಜನರಿಗೆ ದಂಡ

ನವದೆಹಲಿ: ಕೋವಿಡ್ ನಿಯಮ ಉಲ್ಲಂಘನೆ ಕುರಿತು ನಿರ್ಲಕ್ಷ್ಯ ತೋರಿದ ಜನರಿಗೆ ದಂಡ ವಿಧಿಸಲಾಗಿದ್ದು, ಕೇವಲ ದೆಹಲಿ ನಗರವೊಂದರಲ್ಲಿ ಇಂದು 1,200ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

 

ಪೊಲೀಸ್ ಆಯುಕ್ತ ಅನಿಲ್‌ ಮಿತ್ತಲ್‌ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಾಸ್ಕ್‌ ಧರಿಸದ 1,068, ಅಂತರ ಕಾಪಾಡಿಕೊಳ್ಳದ 192 ಜನರಿಗೆ ದಂಡ ವಿಧಿಸಲಾಗಿದೆ ಎಂದು ದೆಹಲಿ ಹೆಚ್ಚುವರಿ ತಿಳಿಸಿದ್ದಾರೆ.

 

ಏಪ್ರಿಲ್‌ 19ರಿಂದ ಜೂನ್‌ 11ರವರೆಗೆ 1,29,590 ಚಲನ್‌ಗಳನ್ನು ಪೊಲೀಸರು ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

ಮಾಸ್ಕ್‌ ಧರಿಸದವರಿಗೆ 1,09,075 ಚಲನ್‌ಗಳನ್ನು ನೀಡಲಾಗಿದೆ, ಅಂತರ ಕಾಪಾಡಿಕೊಳ್ಳದ 18,790, ಸಾರ್ವಜನಿಕ ಸಭೆ ನಡೆಸಿದ 1,532, ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡಿದ 121 ಮಂದಿಗೆ ಇದುವರೆಗೆ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು