News Karnataka Kannada
Monday, April 29 2024
ವಿದೇಶ

ಕಾಬೂಲ್‌ನಲ್ಲಿ ಬಾಂಬ್‌ ದಾಳಿ: 100 ದಾಟಿದ ಮೃತರ ಸಂಖ್ಯೆ

Bombblast 27082021
Photo Credit :

ಕಾಬೂಲ್‌ : ಕಾಬೂಲ್ ವಿಮಾನ ನಿಲ್ದಾಣದ ಬಳಿ ಗುರುವಾರ ರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 100ಕ್ಕೆ ಏರಿದೆ.

ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಮತ್ತಷ್ಟು ದಾಳಿ ನಡೆಯುವ ಅಪಾಯ ಇರುವ ಕಾರಣ ಹಲವು ದೇಶಗಳು ತೆರವು ಕಾರ್ಯಾಚರಣೆಯನ್ನು ಶುಕ್ರವಾರ ತ್ವರಿತಗೊಳಿಸಿವೆ.

ಮೃತಪಟ್ಟವರಲ್ಲಿ ಬಹುತೇಕ ಮಂದಿ ಅಫ್ಗನ್ ಪ್ರಜೆಗಳು. ಅಮೆರಿಕ ಸೇನೆಯ 13 ಮಂದಿ ಮೃತಪಟ್ಟಿದ್ದಾರೆ. ಅಮೆರಿಕ ಸೇನೆಯ 18 ಜನರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಗಡುವಿನೊಳಗೆ ತೆರವು ಕಾರ್ಯಾಚರಣೆಯನ್ನು ಮುಗಿಸಲು ಯತ್ನಿಸುತ್ತೇವೆ ಎಂದು ಅಮೆರಿಕ ಹೇಳಿದೆ.

ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿಯ ಕೊಳಚೆ ಚರಂಡಿಯ ಸನಿಹದಲ್ಲೇ ದಾಳಿ ನಡೆದಿದೆ. ಆ ಚರಂಡಿಯಲ್ಲೇ ಹತ್ತಾರು ದೇಹಗಳು ಛಿದ್ರವಾಗಿ ಬಿದ್ದಿರುವ ಚಿತ್ರ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ‘ದೇಹಗಳು ಮತ್ತು ಮಾಂಸದ ತುಣುಕುಗಳು ಗಾಳಿಯಲ್ಲಿ ಹಾರುತ್ತಿದ್ದವು. ಚರಂಡಿಯ ನೀರು ಕ್ಷಣಮಾತ್ರದಲ್ಲಿ ರಕ್ತದ ಹೊಳೆಯಾಯಿತು’ ಎಂದು ಗಾಯಾಳುವೊಬ್ಬರು ದಾಳಿಯ ಭೀಕರತೆಯನ್ನು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು