Categories: ವಿದೇಶ

ಒಂದೇ ಶ್ವಾಸಕೋಶ ಹೊಂದಿದ್ದರೂ ಕೊರೊನಾ ವಿರುದ್ಧ ಹೋರಾಡಿ ಗೆದ್ದ ನರ್ಸ್‌

ಮಧ್ಯಪ್ರದೇಶದ ಈ ನರ್ಸ್​​ಗೆ ಇರುವುದು ಒಂದೇ ಶ್ವಾಸಕೋಶ. ಹಾಗಿದ್ದಾಗ ಕೊರೊನಾ ಸೋಂಕಿಗೆ ಒಳಗಾದಾಗ ಸಹಜವಾಗಿಯೇ ಆತಂಕ ಮನೆಮಾಡಿತ್ತು. ಆದರೆ ಈ ದಿಟ್ಟ ನರ್ಸ್​ ಸ್ವಲ್ಪವೂ ಹೆದರದೆ 14 ದಿನಗಳಲ್ಲಿ ಕೊರೊನಾ ಸೋಂಕನ್ನು ಮಣಿಸಿದ್ದಾರೆ. ಎರಡೇ ವಾರದಲ್ಲಿ ಇವರ ವರದಿ ನೆಗೆಟಿವ್​ ಬಂದಿದೆ.
ನರ್ಸ್​ ಪ್ರಫುಲಿತ್ ಪೀಟರ್​ ಅವರು ಮಧ್ಯಪ್ರದೇಶದ ಟಿಕಾಮಾರ್ಗ್​ ಸಿವಿಲ್ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಚಿಕಿತ್ಸೆ ಪಡೆದಿದ್ದರು. ಬಾಲ್ಯದಲ್ಲಿ ಒಂದು ಅಪಘಾತವಾದ ನಂತರ ಒಂದೇ ಶ್ವಾಸಕೋಶ ಹೊಂದಿದ್ದ ಇವರಿಗೆ ಸೋಂಕು ತಗುಲಿದಾಗ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೂ ಆತಂಕ ಇದ್ದೇ ಇತ್ತು. ಚಿಕ್ಕವರಿದ್ದಾಗ ತನ್ನಲ್ಲಿನ ಒಂದು ಶ್ವಾಸಕೋಶವನ್ನು ತೆಗೆದಿದ್ದು ಇವರಿಗೆ 2014ರವರೆಗೂ ಗೊತ್ತಿರಲಿಲ್ಲ. 2014ರಲ್ಲಿ ಒಂದು ಬಾರಿ ಎದೆಯ ಎಕ್ಸ್​ ರೇ ಮಾಡಿದಾಗಷ್ಟೇ ಈ ವಿಚಾರ ಆಕೆಗೆ ತಿಳಿಯಿತು.
ಪ್ರಫುಲ್ಲಿತಾ ಪೀಟರ್ ಅವರನ್ನು ಟಿಕಾಮಾರ್ಗ್​ ಆಸ್ಪತ್ರೆಯಲ್ಲಿ ಕೊವಿಡ್​ 19 ಡ್ಯೂಟಿಗೆ ನಿಯೋಜಿಸಲಾಗಿತ್ತು. ರೋಗಿಗಳ ಸೇವೆ ಮಾಡುತ್ತಲೇ ಸೋಂಕಿಗೆ ಒಳಗಾಗಿದ್ದರು. ಪ್ರಫುಲಿತಾ ಪೀಟರ್​ಗೆ ಕೊರೊನಾ ಸೋಂಕು ತಗುಲುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ, ಅಲ್ಲಿನ ವೈದ್ಯರೆಲ್ಲ ತುಂಬ ಆತಂಕ ವ್ಯಕ್ತಪಡಿಸಿದ್ದರು. ಒಂದೇ ಶ್ವಾಸಕೋಶ ಇರುವ ಆಕೆಗೆ ಕೊರೊನಾ ವಿರುದ್ಧ ಹೋರಾಟ ಕಷ್ಟವಾಗಬಹುದು ಎಂದೇ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಪ್ರಫುಲ್ಲಿತಾ ಪೀಟರ್ ಸ್ವಲ್ಪವೂ ಹೆದರದೆ ಮನೆಯಲ್ಲೇ ಐಸೋಲೇಟ್ ಆದರು. ವೈದ್ಯರು ಹೇಳಿದ ಔಷಧಿಯ ಜತೆ ನಿರಂತರವಾಗಿ ಯೋಗ, ಪ್ರಾಣಾಯಾಮ, ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮಗಳನ್ನು ಮಾಡಿದರು. ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಬಲೂನ್​ಗಳನ್ನೂ ಊದಿದರು. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಕೇವಲ 14ದಿನಗಳಲ್ಲಿ ಪ್ರಫುಲ್ಲಿತಾ ಅವರ ಕೊವಿಡ್​ 19 ತಪಾಸಣೆ ವರದಿ ನೆಗೆಟಿವ್​ ಬಂತು.
ನಾನು ಮೊದಲ ಹಂತದಲ್ಲಿಯೇ ಎರಡೂ ಡೋಸ್ ಕೊವಿಡ್ 19 ಲಸಿಕೆ ಪಡೆದಿದ್ದೆ. ಹಾಗಾಗಿ ಈ ಸೋಂಕು ನನಗೇನೂ ಮಾಡುವುದಿಲ್ಲ ಎಂಬ ನಂಬಿಕೆ ಇತ್ತು. ಯೋಗ, ಪ್ರಾಣಾಯಾಮಗಳು ನನ್ನ ಕೈಹಿಡಿದವು ಎನ್ನುತ್ತಾರೆ ಪ್ರಫುಲ್ಲಿತಾ ಪೀಟರ್​.

Desk

Recent Posts

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

8 mins ago

ಜೂನಿಯರ್ ಎನ್​ಟಿಆರ್ ಜನ್ಮದಿನ : ಸ್ಟಾರ್ ಹೀರೋಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ

ಜೂನಿಯರ್ ಎನ್​ಟಿಆರ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ.ಈ ವಿಶೇಷ ದಿನದಂದು ಸೆಲೆಬ್ರಿಟಿಗಳು, ಕುಟುಂಬದವರು, ಅಭಿಮಾನಿಗಳು ನಟನಿಗೆ ಶುಭಾಶಯ ಬರುತ್ತಿದೆ. ಜೂನಿಯರ್…

26 mins ago

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

49 mins ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

1 hour ago

ನಿಮ್ಮ ಡಲ್‌ಸ್ಕಿನ್‌ಗೆ ಇದು ಬೆಸ್ಟ್‌ ಪಾನೀಯ : ಎರಡು ವಾರದಲ್ಲೆ ಉತ್ತಮ ರಿಸಲ್ಟ್‌

ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್‌ಸ್ಕಿನ್‌ ಇರುವವರೂ…

1 hour ago

ಇಂದು 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…

2 hours ago