News Karnataka Kannada
Monday, April 29 2024
ವಿದೇಶ

ಇಂಗ್ಲೆಂಡ್ ನಲ್ಲಿ ಮತ್ತೆ ಲಾಕ್ ಡೌನ್

Photo Credit :

ಇಂಗ್ಲೆಂಡ್ ನಲ್ಲಿ ಮತ್ತೆ ಲಾಕ್ ಡೌನ್

ಲಂಡನ್: ಕೊರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ಇಂಗ್ಲೆಂಡ್‌ನಲ್ಲಿ ಫೆಬ್ರವರಿ ಮಧ್ಯದವರೆಗೂ ಪ್ರಧಾನಿ ಬೋರಿಸ್ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳನ್ನು ಮುಚ್ಚುವ ಕ್ರಮಗಳು ನಾಳೆಯಿಂದ ಜಾರಿಗೆ ಬರಲಿವೆ ಎಂದು ಬೋರಿಸ್ ದೂರದರ್ಶನದ ಭಾಷಣದಲ್ಲಿ ಹೇಳಿದ್ದಾರೆ.

ಬ್ರಿಟನ್ ನಲ್ಲಿ ಕೊರೋನಾ ವೈರಸ್‌ನಿಂದ ಮರಣ ಪ್ರಮಾಣವನ್ನು ಹೆಚ್ಚುತ್ತಿದ್ದು, ಇಂಗ್ಲೆಂಡ್‌ನ ಜನಸಂಖ್ಯೆಯ ಸುಮಾರು 44 ದಶಲಕ್ಷ ಜನರು ಅಥವಾ ಮುಕ್ಕಾಲು ಭಾಗದಷ್ಟು ಜನರು ಈಗಾಗಲೇ ವೈರಸ್ ನ ಕಠಿಣ ನಿರ್ಬಂಧಗಳ ಅಡಿಯಲ್ಲಿ ವಾಸಿಸುತ್ತಿದ್ದಾರೆ.

ಕಳೆದ ಮಂಗಳವಾರ, ಕೇವಲ 24 ಗಂಟೆಗಳಲ್ಲಿ 80,000 ಕ್ಕೂ ಹೆಚ್ಚು ಜನರಲ್ಲಿ ಪಾಸಿಟಿವ್ ದೃಢ ಪಟ್ಟಿದೆ.

ಹೊಸ ಲಾಕ್ ಡೌನ್ ಕ್ರಮಗಳು ಕಳೆದ ವರ್ಷದ ಮಾರ್ಚ್ ಅಂತ್ಯದಿಂದ ಜೂನ್ ವರೆಗೆ ಮೊದಲ, ಮೂರು ತಿಂಗಳ ಲಾಕ್‌ಡೌನ್ ಸಮಯದಲ್ಲಿ ಮಾಡಿದ ಕ್ರಮಗಳಿಗೆ ಹೋಲುತ್ತವೆ ಎಂದಿದ್ದಾರೆ.

ಮನೆಯಿಂದ ಕೆಲಸ ಮಾಡುವುದು, ವ್ಯಾಯಾಮ, ಅಗತ್ಯ ಶಾಪಿಂಗ್ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಹೊರತುಪಡಿಸಿ ಮನೆಯಿಂದ ಹೊರಹೋಗುವ ಪದ್ಧತಿಗೆ ಬ್ರೇಕ್ ಬಿದ್ದಿದೆ.

ಶಿಕ್ಷಣ ಕಾರ್ಯದರ್ಶಿ ಮತ್ತು ಅರ್ಹತಾ ಸಂಸ್ಥೆಗಳ ನಡುವೆ ಸಮಾಲೋಚಿಸಿದ ನಂತರ 16- ಮತ್ತು 18 ವರ್ಷದ ಮಕ್ಕಳಿಗೆ ವಾರ್ಷಿಕ ರಾಷ್ಟ್ರೀಯ ಪರೀಕ್ಷೆಗಳನ್ನು ನಡೆಸಬೇಕೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಾನ್ಸನ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು