ಉಡುಪಿ : ಉಡುಪಿ ಜಿಲ್ಲೆಯ ಮಾಹೆ ವಿವಿಯ ಎಂಐಟಿಯ ಹಳೆ ವಿದ್ಯಾರ್ಥಿನಿ ಎಂ.ಎಸ್.ರಶ್ಮಿ ಸಾಮಂತ್ ಲಂಡನ್ ನ ಪ್ರತಿಷ್ಟಿತ ಆಕ್ಸ್ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲ್ಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ .
ಆಕ್ಸ್ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ . ಉಡುಪಿಯ ಎಂಐಟಿಯ 2016 ರಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು , ಪ್ರಸ್ತುತ ಆಕ್ಸ್ಫರ್ಡ್ ವಿವಿಯ ಲಿನಾ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ಎಂಬ ವಿಷಯದಲ್ಲಿ ಎಂಎಸ್ಸಿ ಪದವಿ ವಿದ್ಯಾರ್ಥಿನಿಯಾಗಿದ್ದಾರೆ .
ಅಂದ ಹಾಗೆ, ಈ ವಿದ್ಯಾರ್ಥಿ ಚುನಾವಣೆಯಲ್ಲಿ ನಾಲ್ಕು ಮಂದಿ ಸ್ಪರ್ಧಿಸಿದ್ದರು. ಒಟ್ಟು 3,708 ಮತಗಳ ಚಲಾವಣೆಯಾಗಿದೆ. ಅದರಲ್ಲಿ ರಶ್ಮಿ ಒಬ್ಬರೇ ಬರೋಬ್ಬರಿ 1,966 ಮತಗಳನ್ನು ಪಡೆದಿದ್ದಾರೆ. ಮೂವರು ಸಹಸ್ಪರ್ಧಿಗಳು ಗಳಿಸಿರುವ ಒಟ್ಟು ಮತಗಳಿಗಿಂತ ಹೆಚ್ಚು ಮತವನ್ನು ರಶ್ಮಿ ಪಡೆದು ದಾಖಲೆ ಬರೆದಿದ್ದಾರೆ. ಈವರೆಗೆ ಆಕ್ಸ್ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯೆ ಎನ್ನುವ ಖ್ಯಾತಿಯೂ ಇವರ ಮುಡಿಗೇರಿದೆ.