ನವದೆಹಲಿ: ಕೆಲವು ತಿಂಗಳುಗಳ ಹಿಂದೆ ಟ್ವಿಟರ್ನಿಂದ ನಿಷೇಧಕ್ಕೆ ಒಳಗಾಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮತ್ತೂಮ್ಮೆ ನಿಷೇಧ ಹೇರಲಾಗಿದೆ.
ಇತ್ತೀಚೆಗೆ, ತಮ್ಮ ಸ್ವಂತ ಸಾಮಾಜಿಕ ಜಾಲತಾಣ ಟ್ರಾತ್ ಸೋಷಿಯಲ್ನಲ್ಲಿ ಹಾಕಿದ ಪೋಸ್ಟ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿದ್ದರು.
ಇದನ್ನು ಗಮನಿಸಿರುವ ಟ್ವಿಟರ್ ಸಂಸ್ಥೆಯ ಟ್ರಂಪ್ರವರ ಟ್ರಾತ್ ಸೋಷಿಯಲ್ನ ಪೋಸ್ಟ್ಗಳಿಗೂ ಶಾಶ್ವತ ನಿಷೇಧ ಹೇರಿದೆ.
2021ರ ಜ. 6ರಂದು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿ ಅಮೆರಿಕದ ಸಂಸತ್ತಿನ ಮೇಲೆ ದಾಳಿ ನಡೆಸಿದ ಆರೋಪ ಟ್ರಂಪ್ ವಿರುದ್ಧ ಬಂದಿದ್ದರಿಂದ ಟ್ವಿಟರ್ ಆಜೀವ ನಿಷೇಧ ಹೇರಿತ್ತು. ಈ ನಿರ್ಧಾರಕ್ಕೆ ಸೆಡ್ಡು ಹೊಡೆದಿದ್ದ ಟ್ರಂಪ್, ಸ್ವಂತ ಸಾಮಾಜಿಕ ಜಾಲತಾಣ ಟ್ರಾತ್ ಸೋಷಿಯಲ್ನ್ನು ಆರಂಭಿಸಿದ್ದರು.