ವಿದೇಶ

ಅಫ್ಘಾನಿಸ್ತಾನದ ಪರಿಸ್ಥಿತಿಯಿಂದ ಲಾಭ ಪಡೆಯಲು ಚೀನಾ ಪ್ಲಾನ್.. ತಾಲಿಬಾನ್ ಭೇಟಿಯಾದ ರಾಯಭಾರಿ

ಕಾಬೂಲ್‌ ; ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾದ ಬೆನ್ನಲ್ಲೇ ಚೀನಾ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಚೀನಾ ಹಣಕಾಸಿನ ನೆರವು ನೀಡೋದಾಗಿ ಹೇಳಿತ್ತು. ಈ ಬೆನ್ನಲ್ಲೇ ಇದೀಗ ಚೀನಾ ರಾಯಭಾರಿಗಳು ಇಂದು ತಾಲಿಬಾನ್ ಸಂಘಟನೆಯ ಸದಸ್ಯರನ್ನ ಭೇಟಿಯಾಗಿದ್ದಾರೆ. ತಾಲಿಬಾನ್​ನ ವಕ್ತಾರರು ಹೇಳಿರುವ ಪ್ರಕಾರ ಕತಾರ್​ನಲ್ಲಿರುವ ತಾಲಿಬಾನ್​ನ ರಾಜಕೀಯ ಕಚೇರಿಯ ಮುಖಂಡ ಅಬ್ದುಲ್ ಸಲಮ್ ಹನಾಫಿಯವರು ಚೀನ ರಾಯಭಾರಿ ವಾಂಗ್ ಯು ಅವರನ್ನ ಭೇಟಿಯಾಗಿ ರಾಯಭಾರ ಕಚೇರಿಗೆ ಭದ್ರತೆ ನೀಡುವ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ.
ಇನ್ನು ಮತ್ತೊಂದು ಪ್ರಮುಖ ವಿಚಾರವೆಂದರೆ ಕಾಬೂಲ್​ನ್ನು ಅಪ್ಘಾನಿಸ್ತಾನ ತನ್ನ ಕೈಸೆರೆ ಮಾಡಿಕೊಳ್ಳುತ್ತಿದ್ದಂತೆಯೇ ಇತರೆ ದೇಶಗಳು ಅಲ್ಲಿನ ರಾಯಭಾರಿ ಕಚೇರಿಗಳನ್ನ ಖಾಲಿಮಾಡಿವೆ. ಆದ್ರೆ ರಷ್ಯಾ ಮತ್ತು ಚೀನಾದ ರಾಯಭಾರಿ ಕಚೇರಿಗಳೂ ಈಗಲೂ ಕಾಬೂಲ್​ನಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇನ್ನು ಇತ್ತೀಚೆಗೆ ಚೀನಾ ತಾಲಿಬಾನ್​ನ್ನು ಅಫ್ಘಾನಿಸ್ತಾನದ ನ್ಯಾಯಯುತ ಆಡಳಿತವನ್ನಾಗಿ ಗುರುತಿಸುತ್ತೇವೆ ಎಂದು ಹೇಳಿಕೆ ನೀಡಿದ್ದನ್ನೂ ಇಲ್ಲಿ ಗಮನಿಸಬಹುದು.ನಿನ್ನೆಯಷ್ಟೇ ಚೀನಾ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಗೆ ಅಮೆರಿಕಾವನ್ನು ದೂಷಿಸಿತ್ತು. ಜೊತೆಗೆ ಅಫ್ಘಾನಿಸ್ತಾನಕ್ಕೆ ಹಣಕಾಸಿನ ನೆರವು ನೀಡೋದಾಗಿ ಹೇಳಿತ್ತು.

Indresh KC

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

5 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

6 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

6 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

6 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

7 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

7 hours ago