News Karnataka Kannada
Tuesday, April 16 2024
Cricket
ವಿದೇಶ

ಹೊಸ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಆರೋಗ್ಯ ಸಚಿವಾಲಯ

Photo Credit :

ಹೊಸ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಎರಡು ಲಕ್ಷ 80 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. ಆರೋಗ್ಯ ಸಚಿವಾಲಯವು ಕೊರೊನಾ ವೈರಸ್ ಹರಡುವಿಕೆ ಮತ್ತು ಅದರ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೊರೊನಾ ಸೋಂಕು ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನುವಾಗ ಅಥವಾ ಮಾತುಕತೆ ನಡೆಸಿದಾಗ ಬಿಡುಗಡೆಯಾಗುವ ಸಣ್ಣ ಹನಿಗಳು ಮೂಲಕ ಕೊರೊನಾ ಹರಡುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಹಿಂದಿನ ವರ್ಷ ಕೊರೊನಾ ಸೋಂಕಿತನ ಸಂಪರ್ಕಕ್ಕೆ ಬಂದಲ್ಲಿ ಮಾತ್ರ ಸೋಂಕು ಹರಡುತ್ತದೆ ಎನ್ನಲಾಗಿತ್ತು. ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿಯಲ್ಲಿ ಔಷಧಿಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಐವರ್ಮೆಕ್ಟಿನ್ ಮತ್ತು ಸ್ಟೀರಾಯ್ಡ್ ಮತ್ತು ಪ್ಲಾಸ್ಮಾ ಚಿಕಿತ್ಸೆ ಬಗ್ಗೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಮಾರ್ಗಸೂಚಿ ಪ್ರಕಾರ, ಕೊರೊನಾ ಸೌಮ್ಯ ರೋಗಲಕ್ಷಣಗಳ ಸಂದರ್ಭದಲ್ಲಿ ಐವರ್ಮೆಕ್ಟಿನ್ ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಮೂರರಿಂದ ಐದು ಬಾರಿ ನೀಡಬಹುದು. ಆದರೆ ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರಿಗೆ ಈ ಔಷಧಿಯನ್ನು ನೀಡಬಾರದು.

ಹೊಸ ಮಾರ್ಗಸೂಚಿ ಪ್ರಕಾರ, ಕೊರೊನಾ ಸೌಮ್ಯ ಲಕ್ಷಣವಿರುವ ವ್ಯಕ್ತಿಗೆ ಸ್ಟಿರಾಯ್ಡ್ ನೀಡುವ ಅಗತ್ಯವಿಲ್ಲ. ಜ್ವರ, ಕೆಮ್ಮು ಹೆಚ್ಚಿದ್ದಲ್ಲಿ ಮೌಖಿಕ ಸ್ಟಿರಾಯ್ಡ್ ನೀಡಬಹುದು ಎಂದು ಹೇಳಲಾಗಿದೆ.

ಆರೋಗ್ಯ ಸಚಿವಾಲಯದ ಕಳೆದ ವರ್ಷದ ಮಾರ್ಗಸೂಚಿಗಳಲ್ಲಿ, ಪ್ಲಾಸ್ಮಾ ಚಿಕಿತ್ಸೆಯನ್ನು ಕೊರೊನಾ ಚಿಕಿತ್ಸೆಯ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಈ ಬಾರಿ ಅದನ್ನು ತೆಗೆದು ಹಾಕಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು