News Karnataka Kannada
Friday, April 19 2024
Cricket
ವಿದೇಶ

ಹೊಸ ಮಸೂದೆಗಳಿಂದ ರೈತರಿಗೆ ಭಾರಿ ಅನುಕೂಲ

Photo Credit :

ಹೊಸ ಮಸೂದೆಗಳಿಂದ ರೈತರಿಗೆ ಭಾರಿ ಅನುಕೂಲ

ನವದೆಹಲಿ: ಹೊಸದಾಗಿ ಅನುಮೋದನೆ ಪಡೆಯಲಾಗುತ್ತಿರುವ ಮಸೂದೆಗಳಿಂದ ರೈತರಿಗೆ ಭಾರೀ ಅನುಕೂಲವಿದೆ ಎಂದು ಅಖಿಲ ಭಾರತದ ರೈತ ಸಂಘಗಳ ಒಕ್ಕೂಟ (ಎಫ್‍ಎಐಎಫ್‍ಎ) ತಿಳಿಸಿದೆ.

ರೈತರು ರಾಜ್ಯದಾದ್ಯಂತ, ರಾಜ್ಯದ ಗಡಿಗಳನ್ನು ಮೀರಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಮಸೂದೆಗಳಲ್ಲಿ ಅವಕಾಶ ನೀಡಲಾಗಿದೆ. ತಮ್ಮ ಉತ್ಪನ್ನಗಳಿಗೆ ತಾವೇ ಮಾರಾಟಗಾರರಾಗಲು ರೈತರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ರೈತರ ಸಮೃದ್ಧಿ ಹಾಗೂ ಆದಾಯ ದ್ವಿಗುಣಗೊಳಿಸುವ ವಿಚಾರವನ್ನು ಮಸೂದೆಗಳು ಖಾತರಿಪಡಿಸಲಿವೆ. ಸರ್ಕಾರದ ಈ ನಡೆಗೆ ಒಕ್ಕೂಟ ಮೆಚ್ಚುಗೆ ಸೂಚಿಸಿದೆ.

ಅಖಿಲ ಭಾರತದ ರೈತ ಸಂಘಗಳ ಒಕ್ಕೂಟವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‍ನ ರೈತರು, ವಾಣಿಜ್ಯ ಬೆಳೆಗಾರರು ಮತ್ತು ಕೃಷಿ ಕಾರ್ಮಿಕರ ಸಂಘಗಳನ್ನು ಪ್ರತಿನಿಧಿಸುತ್ತದೆ.

ದೂರದೃಷ್ಟಿಯ ಈ ಎರಡು ಮಸೂದೆಗಳು ರೈತ ಸಮುದಾಯಕ್ಕೆ ಸುಸ್ಥಿರ ಮತ್ತು ಲಾಭದಾಯಕ ಭವಿಷ್ಯವನ್ನು ಖಾರತಿಪಡಿಸುತ್ತದೆ ಎಂದು ಒಕ್ಕೂಟದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊಸ ಮಸೂದೆಗಳಿಂದ ರೈತರು ರಾಜ್ಯದಾದ್ಯಂತ, ಹೊರ ರಾಜ್ಯಗಳಲ್ಲಿ ತಮ್ಮಿಷ್ಟದಂತೆ ಕೃಷಿ ಉತ್ಪನ್ನಗಳ ಖರೀದಿ ಹಾಗೂ ಮರಾಟ ಮಾಡಲು ಅವಕಾಶ ದೊರೆಯಲಿದೆ. ಇದು ಸರ್ಕಾರದ ಉತ್ತಮ ನಿರ್ಧಾರ. ರೈತರಿಗೆ ಉತ್ತಮ ಆದಾಯ ದೊರೆಯಲಿದ್ದು, ಮಾರಾಟ ಮಾಡುವ ಕೃಷಿ ಉತ್ಪನ್ನಗಳ ಬೆಲೆ ಮೇಲೆ ಅವರದ್ದೇ ನಿಯಂತ್ರಣ ಇರಲಿದೆ. ಭಾರತದ ಕೃಷಿ ನೇತ್ರತ್ವದ ಅಭಿವೃದ್ಧಿ ಕಾರ್ಯಸೂಚಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಮಸೂದೆಗಳು ದೂರದೃಷ್ಟಿಯಿಂದ ಕೂಡಿದ್ದಾಗಿವೆ, ಎಂದು ಅಖಿಲ ಭಾರತ ರೈತ ಸಂಘ ಒಕ್ಕೂಟದ ಅಧ್ಯಕ್ಷ ಬಿ.ವಿ. ಜವರೇಗೌಡ ಹೇಳಿದ್ದಾರೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು