News Karnataka Kannada
Friday, April 19 2024
Cricket
ವಿದೇಶ

ಹುಲ್ಲಹಳ್ಳಿಯಲ್ಲಿ ಎರಡು ಚಿರತೆಗಳ ಕಳೇಬರ ಪತ್ತೆ!

Photo Credit :

ಹುಲ್ಲಹಳ್ಳಿಯಲ್ಲಿ ಎರಡು ಚಿರತೆಗಳ ಕಳೇಬರ ಪತ್ತೆ!

ಹುಲ್ಲಹಳ್ಳಿ: ನಂಜನಗೂಡು ತಾಲ್ಲೂಕಿನ ಕಡಬೂರು ಗ್ರಾಮದ ಜಮೀನೊಂದರಲ್ಲಿ ಬುಧವಾರ ಹೆಣ್ಣು ಚಿರತೆ ಹಾಗೂ ಚಿರತೆ ಮರಿಯೊಂದರ ಮೃತದೇಹಗಳು ಪತ್ತೆಯಾಗಿವೆ.
ಗ್ರಾಮದ ರಾಮನಾಯಕ ಅವರಿಗೆ ಸೇರಿದ ಜಮೀನಿನಲ್ಲಿ 300ರಿಂದ 400 ಮೀಟರ್ ಅಂತರದಲ್ಲಿ 3 ವರ್ಷದ ಚಿರತೆ ಹಾಗೂ ಮರಿ ಚಿರತೆಯ ಮೃತದೇಹಗಳು ಪತ್ತೆಯಾಗಿವೆ. ಹೆಣ್ಣು ಚಿರತೆ ಹಾಗೂ ಅದರ ಮರಿ ಮೇಲ್ನೋಟಕ್ಕೆ ಸಹಜವಾದ ಮೃತಪಟ್ಟಿಲ್ಲ ಎಂಬುದು ಕಂಡು ಬಂದಿದೆ ಎಂದು ನಂಜನಗೂಡು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರಕ್ಷಿತ್ ತಿಳಿಸಿದರು.
ಮಂಗಳವಾರ ರಾತ್ರಿ ಈ ಚಿರತೆಗಳು ಸಾವನ್ನಪ್ಪಿರಬಹುದು. ಎರಡು ಚಿರತೆಗಳ ಮರಣೋತ್ತರ ಪರೀಕ್ಷೆಯನ್ನು ಗುರುವಾರ ನಡೆಸಲು ನಿರ್ಧರಿಸಲಾಗಿದ್ದು, ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಚಿರತೆಗಳ ಸಾವಿನ ಕುರಿತು ಎಸಿಎಫ್ ರಂಗಸ್ವಾಮಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ರಕ್ಷಿತ್ ಹೇಳಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು