News Karnataka Kannada
Monday, April 22 2024
Cricket
ವಿದೇಶ

ಹುಟ್ಟುತ್ತಲೇ 32 ಹಲ್ಲುಗಳನ್ನು ಹೊಂದಿದ್ದ ಮಗು

Photo Credit :

ಹುಟ್ಟುತ್ತಲೇ 32 ಹಲ್ಲುಗಳನ್ನು ಹೊಂದಿದ್ದ ಮಗು

ಮಧ್ಯಪ್ರದೇಶ: ಅನೇಕ ರೀತಿಯ ವಿಸ್ಮಯಗಳನ್ನು ಹುತ್ತು ಮಕ್ಕಳು ಈಗ ಜನಿಸುತ್ತಿದ್ದಾರೆ. ಅಂತೆಯೇ ಇಲ್ಲೊಂದು ಮಗು ಹುಟ್ಟುತ್ತಲೆ 32 ಹಲ್ಲುಗಳನ್ನು ಹೊಂದಿದ್ದ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಕಂಡುಬಂದಿದೆ.

ಹೌದು, ಪ್ರೌಢಾವಸ್ಥೆಗೆ ತಲುಪಿದಾಗ ಸಾಮಾನ್ಯವಾಗಿ ಮನುಷ್ಯರಿಗೆ ಮೂವತ್ತೆರಡು ಹಲ್ಲುಗಳು ಇರುತ್ತದೆ. ಆದರೆ ಈ ಮಗು ಹುಟ್ಟುತ್ತಲೇ 32 ಹಲ್ಲುಗಳನ್ನು ಹೊಂದಿರುವುದು ಎಲ್ಲರ ಗಮನ ಸೆಳೆದಿದೆ. ಆದರೆ ದುರದೃಷ್ಟವಶಾತ್ ಮಗು ಹುಟ್ಟಿದ ಕೆಲವು ಗಂಟೆಗಳಲ್ಲಿ ಸಾವನ್ನಪ್ಪಿದೆ.

ಈ ವಿಚಿತ್ರ ಘಟನೆ ಆದಿವಾಸಿಗಳು ಹೆಚ್ಚಾಗಿ ವಾಸಿಸುವ ಖರಗೋಸ್ ಜಿಲ್ಲೆಯ ಝರನಿಯಾ ವಿಕಾಸಖಂಡ ಎಂಬಲ್ಲಿ ನಡೆದಿದೆ . ಕೋಡಿಖಾಲ್ ಗ್ರಾಮದ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು . ಈ ಮಹಿಳೆಗೆ ಜನಿಸಿದ ಮಗುವಿಗೆ ಹುಟ್ಟುತ್ತಲೇ ಬಾಯಲ್ಲಿ ಮೂವತ್ತೆರಡು ಹಲ್ಲು ಮೂಡಿದ್ದವು . ಈ ಅದ್ಭುತವಾದ ಮಗು ಸಂಪೂರ್ಣವಾಗಿ ಬೆಳೆದಿದ್ದರೂ ಹುಟ್ಟಿ 11 ಗಂಟೆಗಳಲ್ಲಿಯೇ ಪ್ರಾಣ ಬಿಟ್ಟಿದೆ .

ಕಳೆದ ಶುಕ್ರವಾರ ಗರ್ಭಿಣಿ ರೂಪಾಬಾಯಿ ಬೆಳಗ್ಗೆ 8.20 ರ ಸುಮಾರಿಗೆ ಮಗುವಿಗೆ ಜನ್ಮ ನೀಡಿದ್ದಳು . ಅದೇ ದಿನ ಮಧ್ಯಾಹ್ನ 2.30 ರ ಸುಮಾರಿಗೆ ತಾಯಿ – ಮಗುವನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿತ್ತು . ಆದರೆ , ಮನೆಗೆ ಹೋದ ಮೇಲೆ ಅವತ್ತೇ ರಾತ್ರಿ 7.30 ರ ಸುಮಾರಿಗೆ ಮಗು ಮೃತಪಟ್ಟಿದೆ . ಮಗು ಮೃತಪಟ್ಟ ನಂತರ ಮಗುವಿನ ಬಾಯಿ ತೆರೆದು ನೋಡಿದಾಗ ಮಗುವಿಗೆ 32 ಹಲ್ಲು ಮೂಡಿರುವುದು ಮನೆಯವರಿಗೆ ಗೊತ್ತಾಗಿದೆ .

ಈ ಬಗ್ಗೆ ಮಾತನಾಡಿರುವ ಮಗು ಜನಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ . ದೀಪಕ ಶಸ್ತ್ರ, ಹುಟ್ಟುತ್ತಲೇ 32 ಹಲ್ಲು ಇರುವುದು ಅತಿ ದುರ್ಲಭ . ಆದರೆ , ಇಂಥ ಶಿಶುಗಳು ಜನಿಸುವುದು ಅಸಂಭವವೇನಲ್ಲ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು