News Karnataka Kannada
Sunday, April 21 2024
Cricket
ವಿದೇಶ

ಹಿರಿಯ ಕಾಂಗ್ರೆಸ್‌ ನಾಯಕ ರಘುನಂದನ್‌ ಲಾಲ್‌ ಭಾಟಿಯಾ ನಿಧನ

Photo Credit :

ಹಿರಿಯ ಕಾಂಗ್ರೆಸ್‌ ನಾಯಕ ರಘುನಂದನ್‌ ಲಾಲ್‌ ಭಾಟಿಯಾ ನಿಧನ

ಅಮೃತಸರ: ಹಿರಿಯ ಕಾಂಗ್ರೆಸ್‌ ನಾಯಕ, ಆರು ಬಾರಿ ಸಂಸದರಾಗಿದ್ದ ರಘುನಂದನ್‌ ಲಾಲ್‌ ಭಾಟಿಯಾ ಅವರು (100) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದರು.‘ಶುಕ್ರವಾರ ರಾತ್ರಿ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ರಘುನಂದನ್‌ ಅವರು ಕೊನೆ ಉಸಿರೆಳೆದರು’ ಎಂದು ಅವರು ಹೇಳಿದರು.
ರಘುನಂದನ್‌ ಅವರು ಅಮೃತಸರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. ಬಳಿಕ 1980, 1985, 1992, 1996 ಮತ್ತು 1999ರಲ್ಲೂ ಕಾಂಗ್ರೆಸ್‌ ‍‍ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.1992ರಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ ಅವರು, 2004ರಿಂದ 2008ರ ತನಕ ಕೇರಳ ಮತ್ತು 2008ರಿಂದ 2009ರ ತನಕ ಬಿಹಾರದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು