News Karnataka Kannada
Thursday, April 25 2024
ವಿದೇಶ

ಹಳ್ಳಿಗಳಲ್ಲಿ ಇನ್ನೂ ಮನೆ ಮನೆಗೆ ತೆರಳಿ ಕೊರೋನ ಟೆಸ್ಟ್; ಸರಕಾರದಿಂದ ಹೊಸ ಕ್ರಮ ಜಾರಿ

Photo Credit :

ಹಳ್ಳಿಗಳಲ್ಲಿ ಇನ್ನೂ ಮನೆ ಮನೆಗೆ ತೆರಳಿ ಕೊರೋನ ಟೆಸ್ಟ್; ಸರಕಾರದಿಂದ ಹೊಸ ಕ್ರಮ ಜಾರಿ

ಚಂಡೀಗಢ: ಹಳ್ಳಿಗಳಲ್ಲಿ ಕೊರೋನಾ ಸೋಂಕು ನಿಗ್ರಹಕ್ಕೆ ಮನೆಮನೆಗೂ ತೆರಳಿ ಕೊರೋನಾ ಪರೀಕ್ಷೆ ನಡೆಸುವ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಶನಿವಾರ ತಿಳಿಸಿದ್ದಾರೆ.

ಮಾರಣಾಂತಿಕ ಸೋಂಕಿನಿಂದ ಗ್ರಾಮೀಣ ಪ್ರದೇಶಗಳನ್ನು ರಕ್ಷಿಸಲೇಬೇಕಿದೆ. ಹಾಗಾಗಿ ಈ ಅಭಿಯಾನ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಬಗ್ಗೆ ಅರಿವು ಕಾರ‍್ಯಕ್ರಮ, ಸಮಾಲೋಚನೆ ಸಹ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

‘3 ವೈದ್ಯರ ನೇತೃತ್ವದ ಅಂಗನವಾಡಿ ಕಾರ‍್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 8000 ತಂಡಗಳನ್ನು ರಾಜ್ಯಾದ್ಯಂತ ನಿಯೋಜಿಸಲಾಗುತ್ತದೆ.

ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ವರದಿ ಬಂದವರಿಗೆ ಮನೆಯಲ್ಲಿಯೇ ಕ್ವಾರಂಟೈನ್‌ ಆಗಲು ಸಲಹೆ ನೀಡಲಾಗುತ್ತದೆ.ಅಂದಾಜು 500 ಮನೆಗಳಿಗೆ 1 ತಂಡ ಎಂದು ನಿಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು