News Karnataka Kannada
Thursday, April 25 2024
Cricket
ವಿದೇಶ

ಹಣಕ್ಕಾಗಿ ಬ್ಯಾಂಕ್ ಎದುರು ರಾತ್ರಿಯಿಡಿ ಸಾಲುಗಟ್ಟಿನಿಂತ ರೈತರು

Photo Credit :

ಹಣಕ್ಕಾಗಿ ಬ್ಯಾಂಕ್ ಎದುರು ರಾತ್ರಿಯಿಡಿ ಸಾಲುಗಟ್ಟಿನಿಂತ ರೈತರು

ವಿದಿಶಾ: ಕೊರೋನಾ ಸಂಕಷ್ಟದಿಂದಾಗಿ ರೈತರು ತಮ್ಮ ಹಣವನ್ನು ಪಡೆಯಲು ಒದ್ದಾಡುವಂತಾಗಿದೆ. ದುಡ್ಡಿಗಾಗಿ ರಾತ್ರಿ ಇಡೀ ಬ್ಯಾಂಕ್ ಎದುರು ಕಾಯುವ ಘಟನೆ ಮಧ್ಯಪ್ರದೇಶದಲ್ಲಿ ಕಂಡುಬಂದಿದೆ. 

 

ಮಧ್ಯಪ್ರದೇಶದ ವಿದಿಶಾದಲ್ಲಿ ಬ್ಯಾಂಕ್ ನ ಅನೇಕ ಸಿಬ್ಬಂದಿಗಳು ಸೋಂಕಿಗೆ ಆಗಿರುವ ಕಾರಣ ಎರಡು ವಾರಗಳ ಕಾಲ ಬ್ಯಾಂಕ್ ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ದುಡ್ಡು ಇಲ್ಲದೆ ರೈತರು ಅನೇಕ ಪಾಡುಗಳನ್ನು ಪಟ್ಟಿದ್ದರು. ಬ್ಯಾಂಕ್ ತೆಗೆಯುವ ಸುದ್ದಿ ತಿಳಿದ ತಕ್ಷಣವೇ ರಾತ್ರಿಯಿಂದಲೇ ಬ್ಯಾಂಕ್ ಎದುರು ಸಾಲುಗಟ್ಟಿನಿಂತಿದ್ದಾರೆ.

 

ಕರೊನಾ ವೈರಸ್‌ ಇರುವ ಕಾರಣದಿಂದಾಗಿ ಜನದಟ್ಟಣೆ ತಪ್ಪಿಸಲು ಪ್ರತಿದಿನ 150 ಟೋಕನ್​ಗಳನ್ನು ಇಲ್ಲಿ ವಿತರಣೆ ಮಾಡಲಾಗುತ್ತದೆ. ಹೆಚ್ಚಿನ ಜನರಿಗೆ ಹಣ ನೀಡುವುದಿಲ್ಲ. ಇದರಿಂದಾಗಿ ತಮಗೆಲ್ಲಿ ಟೋಕನ್‌ ಸಿಗುವುದಿಲ್ಲವೋ ಎಂಬ ಭಯದಲ್ಲಿ ರೈತರು ತಂಡೋಪತಂಡವಾಗಿ ಆಗಮಿಸಿದ್ದಾರೆ.

 

ಆದರೆ ಅವರಲ್ಲಿ ಕೆಲವರ ಅದೃಷ್ಟ ಚೆನ್ನಾಗಿರಲಿಲ್ಲ. ಅದಾಗಲೇ 150 ಟೋಕನ್‌ ಮುಗಿದ ಕಾರಣ ಉಳಿದವರಿಗೆ ಮಾರನೆಯ ದಿನ ಬರುವಂತೆ ಹೇಳಲಾಯಿತು. ಇದರಿಂದ ಬರಿಗೈನಲ್ಲಿ ವಾಪಸಾದ ಘಟನೆ ನಡೆದಿದೆ. ನಮಗೆ ಡೀಸೆಲ್​ ಖರೀದಿಗೆ ಹಣ ಬೇಕಿತ್ತು ಎಂದು ಕೆಲವರು ಹೇಳಿದರೆ, ರಸಗೊಬ್ಬರ ಖರೀದಿಗೂ ದುಡ್ಡು ಇಲ್ಲದಂತಾಗಿದೆ. 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು