News Karnataka Kannada
Tuesday, April 16 2024
Cricket
ವಿದೇಶ

ಸ್ವಂತ ಹಣದಲ್ಲಿ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ಸರ್ಕಾರಿ ವೈದ್ಯ

Photo Credit :

ಸ್ವಂತ ಹಣದಲ್ಲಿ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ಸರ್ಕಾರಿ ವೈದ್ಯ

ಚನ್ನಪಟ್ಟಣ : ರಾಮನಗರ ಜಿಲ್ಲೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಕೀಲು ತಜ್ಞ ಡಾ. ರಾಜ್‌ಕುಮಾರ್ ತಮ್ಮ ಸ್ವಂತ 1.50 ಲಕ್ಷ ಹಣವನ್ನ ಖರ್ಚು ಮಾಡಿ ತಾವು ಕಾರ್ಯನಿರ್ವವಸುತ್ತಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಸರಬರಾಜು ಪಾಯಿಂಟ್ಗಳನ್ನು ಹಾಕಿಸಿದ್ದಾರೆ.ಇದರಿಂದ ತುರ್ತು ಸಂದರ್ಭದಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗದೆಯೇ ಆಮ್ಲಜನಕ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆಸ್ಪತ್ರೆಯ ಸಾಮಾನ್ಯ ರೋಗಿಗಳ ವಿಭಾಗದಲ್ಲಿ 6 ಹಾಗೂ ಆಸ್ಪತ್ರೆ ಹೊರ ಆವರಣದಲ್ಲಿ 9 ಕಡೆ ವೈದ್ಯಕೀಯ ಆಮ್ಲಜನಕ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಆಸ್ಪತ್ರೆಯ ಆಮ್ಲಜನಕ ಸಿಲಿಂಡರ್ ಸಂಪರ್ಕ ಇದ್ದು, ದಿನದ 24 ಗಂಟೆಯೂ ಆಮ್ಲಜನಕ ಸಿಗುವ ವ್ಯವಸ್ಥೆ ಇದೆ. ಏಕಕಾಲಕ್ಕೆ 4 ಸಿಲಿಂಡರ್ ಗಳನ್ನ ಬಳಸಿಕೊಳ್ಳಬಹುದಾಗಿದೆ.
ಅಂದಹಾಗೇ ಚನ್ನಪಟ್ಟಣ ಆಸ್ಪತ್ರೆಯ ಆಮ್ಲಜನಕ ಹಾಸಿಗೆಗಳು ಸದ್ಯ ಭರ್ತಿಯಾಗಿವೆ. ಈಗಾಗಿ ಇಲ್ಲಿಗೆ ಬರುವ ಸೋಂಕಿತರಿಗೆ ತುರ್ತಾಗಿ ಆಮ್ಲಜನಕ ಬೇಕಿದ್ದಲ್ಲಿ ಅವರು ಈ ಪಾಯಿಂಟ್ ಗಳನ್ನ ಉಪಯೋಗಿಸಿಕೊಳ್ಳಬಹುದಾಗಿದೆ. ಆಮ್ಲಜನಕ ಪಡೆಯಲು ಆಸ್ಪತ್ರೆಗೇ ದಾಖಲಾಗಬೇಕು ಎನ್ನುವ ಅಗತ್ಯ ಇರುವುದಿಲ್ಲ. ಇದರಿಂದ ಸಕಾಲದಲ್ಲಿ ರೋಗಿಗಳಿಗೆ ಸೇವೆ ದೊರೆತು ಇನ್ನಷ್ಟು ಜನರ ಪ್ರಾಣ ಉಳಿಸಬಹುದಾಗಿದೆ. ಇನ್ನೂ ವೈದ್ಯ ಡಾ. ರಾಜ್‌ ಕುಮಾರ್ ಅವರ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕೆಲಸಗಳು ಎಲ್ಲಾ ಆಸ್ಪತ್ರೆಗಳಲ್ಲಿ ಮಾಡಿದ್ರೆ ಅನುಕೂಲವಾಗುತ್ತದೆ. ಈ ಬಗ್ಗೆ ಯುವಮುಖಂಡ ಮಹೇಶ್ ಮೆಂಗಳ್ಳಿ ಮಾತನಾಡಿ ನಿಜಕ್ಕೂ ಸರ್ಕಾರದ ಜನಪ್ರತಿನಿಧಿಗಳು, ಸಚಿವರು ಮಾಡಬೇಕಾದ ಕೆಲಸವನ್ನ ಓರ್ವ ಡಾಕ್ಟರ್ ಮಾಡಿದ್ದಾರೆ. ಇದನ್ನ‌ ರಾಜ್ಯದ ಎಲ್ಲಾ ಕ್ಷೇತ್ರದ ಜನಪ್ರತಿನಿಧಿಗಳು ಮಾಡಬೇಕು.
ಡಾ. ರಾಜ್ ಕುಮಾರ್ ಮಾಡಿರುವ ಕೆಲಸಕ್ಕೆ ಚನ್ನಪಟ್ಟಣ ತಾಲೂಕಿನ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಜನರಿಗೆ ಈ ಯೋಜನೆ ಬಹಳಷ್ಟು ಪ್ರಯೋಜನವನ್ನ ಪಡೆಯುತ್ತಿದ್ದಾರೆ. ನಿಜಕ್ಕೂ ಈ ವೈದ್ಯರು ಮಾಡಿರುವ ಕೆಲಸ ಜನಪರವಾದದ್ದು. ಹಾಗಾಗಿ ಇಂತಹ ಕೆಲಸಗಳಿಗೆ ಸಾರ್ವಜನಿಕರು ಸಹ ಸಹಕಾರ ಕೊಡಬೇಕೆಂದು ಮನವಿ ಮಾಡಿದ್ದಾರೆ.ಒಟ್ಟಾರೆ ಸರಕಾರ ಜನಪ್ರತಿನಿಧಿಗಳು ಮಾಡದ ಕೆಲಸವನ್ನ ಸರಕಾರಿ ಆಸ್ಪತ್ರೆಯ ವೈದ್ಯ ತಮ್ಮ ಸ್ವಂತ ಹಣದಲ್ಲಿ ಮಾಡಿ ಇದೀಗ ಮಾದರಿಯಾಗಿದ್ದಾರೆ. ಇದೀಗ ಬೇರೆ ಬೇರೆ ಜಿಲ್ಲೆಗಳ ವೈದ್ಯರು ಕೂಡ ಇವರ ಬಳಿ ಈ ಬಗ್ಗೆ ಚರ್ಚೆ ಮಾಡಿ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು