News Karnataka Kannada
Friday, April 19 2024
Cricket
ವಿದೇಶ

ಸೋನು ಸೂದ್​ ಹೆಸರಲ್ಲಿ ಮೋಸಕ್ಕೆ ಮುಂದಾದ ಕಿಡಿಗೇಡಿಗಳು

Photo Credit :

ಸೋನು ಸೂದ್​ ಹೆಸರಲ್ಲಿ  ಮೋಸಕ್ಕೆ ಮುಂದಾದ   ಕಿಡಿಗೇಡಿಗಳು

ಬಹುಭಾಷಾ ನಟ ಸೋನು ಸೂದ್​ ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಅಷ್ಟರಮಟ್ಟಿಗೆ ಅವರು ತಮ್ಮ ಕೆಲಸಗಳ ಮೂಲಕವೇ ಫೇಮಸ್​ ಆಗಿದ್ದಾರೆ. ಸಿನಿಮಾಗಳಿಂದ ಎಷ್ಟು ಅಭಿಮಾನಿಗಳನ್ನು ಅವರು ಸಂಪಾದಿಸಿಕೊಂಡಿದ್ದರೋ ಅದಕ್ಕಿಂತಲೂ 10 ಪಟ್ಟು ಹೆಚ್ಚು ಅಭಿಮಾನಿಗಳನ್ನು ಅವರು ತಮ್ಮ ಹೃದಯಶ್ರೀಮಂತಿಕೆಯ ಕಾರಣದಿಂದ ಗಳಿಸಿಕೊಂಡಿದ್ದಾರೆ. ಸೋನು ಸೂದ್​ ಎಂದರೆ ಒಂದು ಭರವಸೆ ಎನ್ನುವ ನಂಬಿಕೆ ಜನರಲ್ಲಿ ಮೂಡಿದೆ. ಆದರೆ ಆ ನಂಬಿಕೆಯನ್ನೇ ದುರ್ಬಳಕೆ ಮಾಡಿಕೊಳ್ಳುವ ಜಾಲಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಿರುವುದು ಅನಿವಾರ್ಯ ಆಗಿದೆ.ದೇಶಾದ್ಯಂತ ಕೊರೊನಾ ವೈರಸ್​ ಎರಡನೇ ಅಲೇ ಜೋರಾಗಿ ಹಬ್ಬಿರುವ ಈ ಸಂದರ್ಭದಲ್ಲಿ ಅನೇಕರಿಗೆ ಸೋನು ಸೂದ್​ ನೆರವು ನೀಡುತ್ತಿದ್ದಾರೆ. ಆಕ್ಸಿಜನ್​, ಔಷಧಿ, ಬೆಡ್​ ವ್ಯವಸ್ಥೆ ಸೇರಿದಂತೆ ಅನೇಕ ಸಹಾಯಗಳನ್ನು ಅವರು ಮಾಡುತ್ತಿದ್ದಾರೆ. ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಂದ ಹಣ ಕಬಳಿಸಲು ಕೆಲವರು ಸ್ಕೆಚ್​ ಹಾಕಿದ್ದಾರೆ. ಈ ಮೋಸದ ಜಾಲದ ಬಗ್ಗೆ ಸ್ವತಃ ಸೋನು ಸೂದ್​ಗೆ ಈಗ ಮಾಹಿತಿ ಸಿಕ್ಕಿದೆ. ಅದನ್ನು ಅವರು ಬಯಲಿಗೆ ಎಳೆದಿದ್ದಾರೆ.
‘ಸೋನು ಸೂದ್​ ಅವರ ತಂಡಕ್ಕೆ ನೀವು ದೇಣಿಗೆ ನೀಡಬಹುದು. ಒಂದು ರೂಪಾಯಿಯಿಂದ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ನೀಡಬಹುದು. ಈ ಕೆಳಗಿನ ನಂಬರ್​ಗೆ ಫೋನ್​ಪೇ ಮಾಡಿ’ ಎಂದು ಬರೆದಿರುವ ಫೋಸ್ಟರ್​ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದೆ. ಅದರಲ್ಲಿ ಸೋನು ಸೂದ್​ ಅವರ ಫೋಟೋ ಕೂಡ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಅದರ ಸ್ಕ್ರೀನ್ ಶಾಟ್​ ಹಂಚಿಕೊಂಡಿರುವ ಸೋನು ಸೂದ್​ ಅವರು ‘ಫೇಕ್​’ ಎಂದು ಹೇಳಿದ್ದಾರೆ. ಇಂಥ ಜಾಲದ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಜನರಿಗೆ ಅವರು ವಾರ್ನಿಂಗ್​ ನೀಡಿದ್ದಾರೆ.
ಇನ್ನು, ಸೋನು ಸೂದ್​ ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೂ ಒಂದು ವರ್ಗದ ಜನರು ಅವರನ್ನು ಅನುಮಾನದ ಕಣ್ಣುಗಳಿಂದಲೇ ನೋಡುತ್ತಿದ್ದಾರೆ. ಒಡಿಶಾದಲ್ಲಿ ಒಬ್ಬ ವ್ಯಕ್ತಿಗೆ ಇತ್ತೀಚೆಗೆ ಸೂನು ಸೂದ್​ ಬೆಡ್​ ವ್ಯವಸ್ಥೆ ಮಾಡಿಸಿದ್ದರು. ಅದರ ಬಗ್ಗೆ ಅಲ್ಲಿನ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ತಾವು ಮಾಡದೇ ಇರುವ ಕೆಲಸಕ್ಕೆ ಸೋನು ಸೂದ್​ ಕ್ರೆಡಿಟ್​ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಆದರೆ ಅದಕ್ಕೆ ಸಾಕ್ಷಿ ಸಮೇತ ಸೋನು ಸೂದ್​ ಉತ್ತರ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು