News Karnataka Kannada
Friday, April 19 2024
Cricket
ವಿದೇಶ

ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿ ಭಾವುಕರಾದ ರೇಣುಕಾಚಾರ್ಯ

Photo Credit :

ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿ ಭಾವುಕರಾದ ರೇಣುಕಾಚಾರ್ಯ

ದಾವಣಗೆರೆ: ಇತ್ತೀಚೆಗೆ ಮಾನವೀಯ ಕಾರ್ಯಗಳ ಮೂಲಕ ಸದಾ ಸುದ್ದಿಯಲ್ಲಿರುವ ಶಾಸಕರ ಎಂಪಿ ರೇಣುಕಾಚಾರ್ಯ ಇದೀಗ ಮತ್ತೊಮ್ಮೆ ತಮ್ಮ ಮಹಾನ್ ಕಾರ್ಯದಿಂದ ಜನ ಮೆಚ್ಚುಗೆ ಗಳಿಸಿದ್ದಾರೆ.
ಹೌದು. ಆಂಧ್ರದ ಯುವಕನೊಬ್ಬನಿಗೆ ಮಹಾಮಾರಿ ಕೊರೊನಾ ಬಂದಿತ್ತು. ಹೀಗಾಗಿ ಆತನಿಗೆ ಹೊನ್ನಾಳಿಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಇತ್ತ ಆತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ಸೋಂಕಿತನ ಅಂತ್ಯಕ್ರಿಯೆಯನ್ನು ತಾವೇ ಮುಂದೆ ನಿಂತು ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ತಾವೇ ಸ್ವತಃ ಅಂಬುಲೆನ್ಸ್ ಚಲಾಯಿಸಿಕೊಂಡು ಹೋಗಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ನಂತರ ಈ ಭಾವನಾತ್ಮಕ ಸನ್ನಿವೇಶವನ್ನು ಶಾಸಕರು ಅಕ್ಷರ ರೂಪದಲ್ಲಿ ಇಳಿಸಿದ್ದಾರೆ. ನನ್ನ ಜೀವನದಲ್ಲಿ ಸೋಮವಾರ ಸಂಜೆ ನನಗಾದಷ್ಟು ದುಃಖ ಎಂದೂ ಆಗಿರಲಿಲ್ಲ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ತಂದೆ-ತಾಯಿಗಳ ದುಃಖ ಮನಕಲಕುವಂತಿತ್ತು. ಶವಸಂಸ್ಕಾರ ಮುಗಿಸಿಬಂದ ಕೆಲವು ಗಂಟೆಗಳು ಆ ತಾಯಿ ಕರುಳ ಆಕ್ರಂದನ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಇದರಿಂದ ನನಗೆ ರಾತ್ರಿ ಪೂರ್ತಿ ಸರಿಯಾಗಿ ನಿದ್ದೆಯೂ ಬರಲಿಲ್ಲ. ರಾಜಕೀಯ, ಅಧಿಕಾರ, ಹಣ, ಅಂತಸ್ತು ಏನೇ ಇರಲಿ ವಿಧಿಯ ಮುಂದೆ ಎಲ್ಲವೂ ಶೂನ್ಯ.
ಹುಟ್ಟಿದ ಮೇಲೆ ಎಲ್ಲರೂ ಒಂದು ದಿನ ಸಾಯಲೇ ಬೇಕು. ಆದರೆ ಈ ರೀತಿಯ ಸಾವು-ನೋವುಗಳನ್ನು ತಡೆದುಕೊಳ್ಳುವುದು ಕಷ್ಟ. ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಏನೇ ಟೀಕೆ ಮಾಡಲಿ, ನಾನು ಮಾತ್ರ ನನ್ನ ಅವಳಿ ತಾಲೂಕಿನ ಬಂಧುಗಳ ಕಷ್ಟದಲ್ಲಿ ಅವರ ಮನೆಮಗನಾಗಿ ಭಾಗಿಯಾಗುತ್ತೇನೆ. ಸರ್ವರಿಗೂ ಆಯುರಾರೋಗ್ಯ ನೀಡಿ ಈ ಸಂಕಷ್ಟದ ಸಮಯದಿಂದ ಪಾರುಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು