News Karnataka Kannada
Sunday, April 14 2024
Cricket
ವಿದೇಶ

ಸುಶಾಂತ್ ಆತ್ಮಹತ್ಯೆ ಪ್ರಕರಣ: ಸ್ಫೋಟಕ ಮಾಹಿತಿ ಪತ್ತೆ

Photo Credit :

ಸುಶಾಂತ್ ಆತ್ಮಹತ್ಯೆ ಪ್ರಕರಣ: ಸ್ಫೋಟಕ ಮಾಹಿತಿ ಪತ್ತೆ

ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದ್ದು, ಆತನ ಗೆಳತಿ ರಿಯಾ ಚಕ್ರವರ್ತಿಗೆ ಕಳೆದ ಕೆಲವು ವರ್ಷಗಳಿಂದ ಮಾದಕ ದ್ರವ್ಯ ಸಾಗಾಟದಾರರೊಂದಿಗೆ ಸಂಪರ್ಕವಿರುವುದು ಪತ್ತೆಯಾಗಿದೆ.

ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ವಾಟ್ಸಪ್ ಸಂದೇಶಗಳನ್ನು ಪರಿಶೀಲನೆ ನಡೆಸಿದ ವೇಳೆ ಆಕೆಗೆ ಮಾದಕ ದ್ರವ್ಯ ಸಾಗಾಟದಾರರ ಜತೆಗೆ ಸಂಪರ್ಕವಿರುವುದು ಪತ್ತೆಯಾಗಿದೆ ಎಂದು ಸಿಬಿಐ ತನಿಖೆಯಿಂದ ಬಹಿರಂಗವಾಗಿದೆ.

ಮಾದಕ ದ್ರವ್ಯ ಸಾಗಾಟದಾರ ಗೌರವ್ ಆರ್ಯ ಜತೆಗೆ ರಿಯಾ ಕೆಲವು ಸಂದೇಶಗಳನ್ನು ಕಳುಹಿಸಿದ್ದಳು. ಆದರೆ ಇದನ್ನು ಡಿಲೀಟ್ ಮಾಡಿರುವಳು. ಸಿಬಿಐ ತನಿಖೆಯ ವೇಳೆ ಇದನ್ನು ಪಡೆದಿದ್ದು, 2017, 2018, 19 ಹಾಗೂ 2020ರಲ್ಲಿ ಆಕೆ ಮಾಡಿರುವಂತಹ ಸಂದೇಶಗಳನ್ನು ಪಡೆಯಲಾಗಿದೆ.

ಜಾರಿ ನಿರ್ದೇಶನಾಲಯವು ಈಗಾಗಲೇ ಈ ಪ್ರಕರಣದಲ್ಲಿ ರಿಯಾ ಮಾದಕ ದ್ರವ್ಯ ಸಾಗಾಟದಾರರ ಜತೆಗೆ ಸಂಪರ್ಕವಿರುವುದನ್ನು ಬಹಿರಂಗಗೊಳಿಸಿತ್ತು. ಸಿಬಿಐ ಕೂಡ ಈಗ ಜಾರಿ ನಿರ್ದೇಶನಾಲಯದಿಂದ ಮಾಹಿತಿ ಸಂಗ್ರಹಿಸುತ್ತಿದೆ. ರಿಯಾ, ಆಕೆಯ ಕುಟುಂಬಸ್ಥರ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಿಜೆಪಿಯ ಸಂಸದ ಸುಬ್ರಹ್ಮಣ್ಯ ಸ್ವಾಮಿ ಅವರು ಕೂಡ ಸುಶಾಂತ್ ಆತ್ಮಹತ್ಯೆಗೆ ಮೊದಲು ದುಬೈ ಮೂಲದ ಮಾದಕ ದ್ರವ್ಯ ಸಾಗಾಟದಾರನನ್ನು ಭೇಟಿ ಮಾಡಿದ್ದ ಎಂದು ಬಹಿರಂಗಪಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು