News Karnataka Kannada
Thursday, April 25 2024
ವಿದೇಶ

ಸುಲಿಗೆಕೋರನನ್ನೇ ಅಪಹರಿಸಿ ಮೂರು ಲಕ್ಷ ನೀಡಲು ಬೆದರಿಸಿದ ಪೋಲೀಸ್‌ ಕಾನ್ಸ್‌ ಟೇಬಲ್‌

Photo Credit :

ಸುಲಿಗೆಕೋರನನ್ನೇ ಅಪಹರಿಸಿ ಮೂರು ಲಕ್ಷ ನೀಡಲು ಬೆದರಿಸಿದ ಪೋಲೀಸ್‌ ಕಾನ್ಸ್‌ ಟೇಬಲ್‌

ನವದೆಹಲಿ: ಸುಲಿಗೆ ಪ್ರಕರಣದ ಆರೋಪಿಯನ್ನು ಅಪಹರಿಸಿ ಆತನ ಬಿಡುಗಡೆಗೆ ಕುಟುಂಬದಿಂದ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದೆಹಲಿ ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ನನ್ನು ಬಂಧಿಸಲಾಗಿದ್ದು, ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪೊಲೀಸ್​ ಠಾಣೆಯೊಳಗೆ ರಕ್ಷಿಸಲಾಗಿದೆ.ಜಾಮಿಯಾ ನಗರ ಪೊಲೀಸ್​ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್​ ಕಾನ್ಸ್​ಟೇಬಲ್​ನಿಂದ ಈ ಕೃತ್ಯ ನಡೆದಿದೆ. ಮೇ 25ರಂದು ದೆಹಲಿಯ ಸನ್​ಲೈಟ್​ ಕಾಲನಿಯ ಮಹಿಳೆಯೊಬ್ಬಳು ಪೊಲೀಸ್​ ಠಾಣೆಗೆ ತೆರಳಿ ತನ್ನ ಸಹೋದರ ಕಿಡ್ನ್ಯಾಪ್​ ಆಗಿರುವ ಬಗ್ಗೆ ಮತ್ತು ಬಿಡುಗಡೆಗೆ ಮೂರು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರು ನೀಡುತ್ತಾಳೆ.
ಇದಾದ ಬಳಿಕ ಫೋನ್​ ಕರೆ ಮಾಡುವ ಆಕೆ ನಾನೀಗ ಒಂದು ಲಕ್ಷ ರೂ. ಹಣವನ್ನು ಹಿಡಿದುಕೊಂಡು ಸಾರಾಯಿ ಕಲೆ ಬಸ್​ ನಿಲ್ದಾಣದ ಬಳಿ ನಿಂತಿದ್ದೇನೆ. ಆದರೆ, ಅವರು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆಂದು ಹೇಳುತ್ತಾಳೆ. ಕರೆಯನ್ನು ಗಂಭೀರವಾಗಿ ಪರಿಗಣಿಸುವ ಪೊಲೀಸರು ತಕ್ಷಣ ಸನ್​ಲೈಟ್​ ಕಾಲನಿಗೆ ತಲುಪುತ್ತಾರೆ. ಕರೆ ಮಾಡಿದ ಭಾರತಿ ಎಂಬಾಕೆ ಅಧಿಕಾರಿಗಳಿಗೆ ಎದುರಾಗುತ್ತಾಳೆ. ಈ ವೇಳೆ ತನ್ನ ಸಹೋದರ ಜವಹರ ಪಾರ್ಕ್​ ನಿವಾಸಿ ಆಗಿರುವ ವರುಣ್​ನನ್ನು ಕೆಲವು ಅಪರಿಚಿತ ವ್ಯಕ್ತಿಗಳು ಕಿಡ್ನ್ಯಾಪ್​ ಮಾಡಿದ್ದಾರೆಂದು ಹೇಳುತ್ತಾಳೆ. ಅಪಹರಣಕಾರರು ಸಹೋದರನ ಮೊಬೈಲ್​ನಿಂದ ವಾಟ್ಸ್​ಆ್ಯಪ್​ ಕಾಲ್​ ಮೂಲಕ ಕರೆ ಮಾಡಿದ್ದಾಗಿ ಹೇಳುತ್ತಾಳೆ. ಸರಾಯಿ ಕಲೆ ಖಾನ್​​ ಸ್ಥಳಕ್ಕೆ 3 ಲಕ್ಷ ರೂ. ಹಣವನ್ನು ತರುವಂತೆ ಅಪಹರಣಕಾರರು ಒತ್ತಾಯಿಸಿರುತ್ತಾರೆ. ಅಲ್ಲದೆ, ಬೇರೊಂದು ಮೊಬೈಲ್​ ನಂಬರ್​ನಿಂದಲೂ ಅಪಹರಣಕಾರರು ಕರೆ ಮಾಡಿರುತ್ತಾರೆ. ತನಿಖೆ ನಡೆಸಿದ ಅಧಿಕಾರಿಗಳು ಪ್ರಕರಣ ಸಂಬಂಧ ಹೆಡ್​ ಕಾನ್ಸ್​ಟೇಬಲ್​ ಮತ್ತು ಆತನ ಜತೆಗಾರರನ್ನು ಬಂಧಿಸುತ್ತಾರೆ.
ವಿಚಾರಣೆ ವೇಳೆ ಆರೋಪಿ ಹೆಡ್​ ಕಾನ್ಸ್​ಟೇಬಲ್​ ರಾಕೇಶ್​ ಕುಮಾರ್ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ. ಮಾಹಿತಿದಾರ ಅಮೀರ್​ ಖಾನ್​, ರಾಕೇಶ್​ಗೆ ಒಮ್ಮೆ ಕರೆ ಮಾಡಿ ಆತನ ಸ್ನೇಹಿತನ ಗ್ಯಾಂಗ್​ ಒಂದು ಗಾಂಧಿನಗರದ ನಿವಾಸಿಯೊಬ್ಬರ ಮನೆಯಲ್ಲಿ ಸುಲಿಗೆ ಮಾಡಿರುವುದಾಗಿ ತಿಳಿಸುತ್ತಾನೆ. ಗ್ಯಾಂಗ್​ ಸದಸ್ಯರಲ್ಲಿ ಒಬ್ಬನಾದ ವರುಣ್​ ತನ್ನ ಪಾಲಿನ ಸುಮಾರು 1.5 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿರುವುದಾಗಿ ಹೇಳುತ್ತಾನೆ.
ವರಣ್​ನನ್ನು ಬಂಧಿಸಿದರೆ ದರೋಡೆ ಹಣವನ್ನು ವಶಕ್ಕೆ ಪಡೆಯಬಹುದೆಂಬ ದುರಾಸೆಗೆ ರಾಕೇಶ್​ ಬೀಳುತ್ತಾನೆ. ಈಗಾಗಲೇ ದರೋಡೆ ಸಂಬಂಧ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಇದೇ ನೆಪ ಇಟ್ಟುಕೊಂಡು ಆತನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಸದ್ಯ ರಾಕೇಶ್​ನನ್ನು ಬಂಧಿಸಲಾಗಿದ್ದು, ವರುಣ್​ನನ್ನು ರಕ್ಷಿಸಿ ಜಾಮಿಯಾ ನಗರ ಪೊಲೀಸ್​ ಠಾಣೆಗೆ ಕರೆದು ತರಲಾಗಿದೆ. ವರುಣ್​ನನ್ನು ಸಹ ಸುಲಿಗೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತನ ಮನೆಯಲ್ಲಿ ಸುಲಿಗೆ ಮಾಡಿದ್ದ 1 ಲಕ್ಷ ರೂ. ಹಣವನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು