News Karnataka Kannada
Saturday, April 13 2024
Cricket
ವಿದೇಶ

ಸಿಡಿಲಿನ ಅಬ್ಬರಕ್ಕೆ ಮೃತಪಟ್ಟ 20 ಮಂದಿ

Photo Credit :

ಸಿಡಿಲಿನ ಅಬ್ಬರಕ್ಕೆ ಮೃತಪಟ್ಟ 20 ಮಂದಿ

ಕೋಲ್ಕತ್ತ : ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಗುಡುಗು ಸಿಡಿಲುಗಳು ಸಹಜ. ಆದರೆ ಇದರಿಂದ ಅನೇಕ ಮಂದಿಯ ಪ್ರಾಣ ಹೋಗುವುದು ಅನಿರೀಕ್ಷಿತ. ಹೌದು, ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ ಸಿಡಿಲಿನಿಂದಾಗಿ ಅನೇಕ ಮಂದಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. 

 

ಸೋಮವಾರ ಸಂಭವಿಸಿದ ಸಿಡಿಲಿನ ಅಬ್ಬರಕ್ಕೆ ಸುಮಾರು 20 ಜನ ಮೃತಪಟ್ಟಿದ್ದು, ಪಶ್ಚಿಮ ಬಂಗಾಳದ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ . ಮುರ್ಷಿದಾಬಾದ್‌ನಲ್ಲಿ ಮತ್ತು ಹೂಗ್ಲಿಯಲ್ಲಿ ತಲಾ 9 ಮಂದಿ ಸಾವನ್ನಪ್ಪಿದರೆ , ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಇಬ್ಬರು ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ. 

 

 ಮುರ್ಷಿದಾಬಾದ್ ನಲ್ಲಿ ಸಂಭವಿಸಿದ ಸಿಡಿಲಿನ ಅಬ್ಬರಕ್ಕೆ ಮೂವರು ಗಾಯಗೊಂಡಿದ್ದು , ಅವರನ್ನು ಜಂಗೀಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ . ಕೋಲ್ಕತ್ತ ಸೇರಿದಂತೆ ದಕ್ಷಿಣ ಬಂಗಾಳದ ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಗುಡುಗು ಸಹಿತ ಭಾರೀ ಮಳೆಯಾಗಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು