News Karnataka Kannada
Monday, April 15 2024
Cricket
ವಿದೇಶ

ಸಾವಿರ ಹಾಸಿಗೆಯ ಕೋವಿಡ್‌ ಸೆಂಟರ್‌ ನಿರ್ಮಿಸಿ ಜನಸೇವೆಗೆ ಮುಂದಾದ ರಿಲಯನ್ಸ್‌

Photo Credit :

 ಸಾವಿರ ಹಾಸಿಗೆಯ ಕೋವಿಡ್‌ ಸೆಂಟರ್‌ ನಿರ್ಮಿಸಿ ಜನಸೇವೆಗೆ ಮುಂದಾದ ರಿಲಯನ್ಸ್‌

ಅಹ್ಮದಾಬಾದ್​: ಕೊರೋನಾ 2ನೇ ಅಲೆಯಿಂದ ದೇಶ ನರಳುತ್ತಿದ್ದು, ದೊಡ್ಡ ದೊಡ್ಡ ಉದ್ಯಮಿಗಳು, ಸಂಸ್ಥೆಗಳು ಸಹಾಯಹಸ್ತ ಚಾಚುತ್ತಿವೆ. ಇದರಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್​​ ಸಂಸ್ಥೆ ಹೀಗಾಗಲೇ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಲಸಿಕೆ ಅಭಿಯಾನವನ್ನು ಕೈಗೊಂಡಿದೆ. ಇದರ ಬೆನ್ನಲ್ಲೇ ಗುಜರಾತ್​ನ ಜಾಮ್​​ನಗರದಲ್ಲಿ 1,000 ಹಾಸಿಗೆಗಳುಳ್ಳ ಕೋವಿಡ್​ ಕೇರ್​ ಸೆಂಟರನ್ನು ತೆರೆದಿದೆ. ಈ ಕೋವಿಡ್​ ಕೇರ್​ ಸೆಂಟರ್​ ಮೂಲಕ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ಆಕ್ಸಿಜನ್​ ಸೌಲಭ್ಯ ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚವನ್ನು ರಿಲಯನ್ಸ್​ ಸಂಸ್ಥೆಯೇ ಭರಿಸಲಿದೆ. ಜಾಮ್​ನಗರದ ಮೆಡಿಕಲ್​ ಕಾಲೇಜ್​ನಲ್ಲಿ ಸದ್ಯ 400 ವೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವಾರದೊಳಗೆ 600 ಬೆಡ್​ಗಳನ್ನು ವ್ಯವಸ್ಥೆಯನ್ನು ರಿಲಯನ್ಸ್​ ಸಂಸ್ಥೆ ಮಾಡಲಿದೆ. ಕೋವಿಡ್​ ಕೇರ್​ ಸೆಂಟರ್​ಗೆ ಬೇಕಾದ ಮೆಡಿಕಲ್​​ ಉಪಕರಣಗಳು, ಅಗತ್ಯ ಔಷಧಿ, ಆಕ್ಸಿಜನ್​ ಸಿಲಿಂಡರ್​ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ರಿಲಯನ್ಸ್​ ಸಂಸ್ಥೆ ಒದಗಿಸಲಿದೆ. ಗುಜರಾತ್​ ಸರ್ಕಾರ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಲಿದೆ.

ರಾಜ್ಯ ಸರ್ಕಾರ, ರಿಲಯನ್ಸ್​ ಸಂಸ್ಥೆ ಸಹಯೋಗದಲ್ಲಿ ಈ ಕೋವಿಡ್​ ಕೇರ್​ ಸೆಂಟರ್​ ಕಾರ್ಯ ನಿರ್ವಹಿಸಲಿದೆ. ಈ ಭಾಗದ ಜಾಮ್​​ನಗರ, ಕಬಾಲಿಯಾ, ದ್ವಾರಕ, ಪೋರಬಂದರ್​ ಹಾಗೂ ಸೌರಾಷ್ಟ್ರದ ಜನರಿಗೆ ಈ ಕೋವಿಡ್​ ಸೆಂಟರ್​ ಆಸರೆಯಾಗಲಿದೆ.1,000 ಬೆಡ್​ಗಳುಳ್ಳ ಕೋವಿಡ್​ ಕೇರ್​ ಸೆಂಟರ್​ ನಿರ್ಮಾಣದ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ರಿಲಯನ್ಸ್​ ಸಂಸ್ಥೆ ಮುಖ್ಯಸ್ಥರಾದ ನೀತಾ ಅಂಬಾನಿ, ಕೊರೋನಾ ಕಷ್ಟ ಕಾಲದಲ್ಲಿ ದೇಶಕ್ಕೆ ಸಹಾಯದ ಅಗತ್ಯವಿದೆ. ನಮ್ಮ ಸಂಸ್ಥೆ ಎಲ್ಲ ರೀತಿಯಲ್ಲೂ ನೆರವು ನೀಡಲು ಸಿದ್ಧವಾಗಿದೆ. ಮುಖ್ಯವಾಗಿ ಇಂದು ಸರ್ಕಾರಕ್ಕೆ ಹೆಚ್ಚುವರಿ ಕೋವಿಡ್​ ಕೇರ್​ ಸೆಂಟರ್​ನ ಅಗತ್ಯವಿದೆ. ಇಂಥ ಸಂಕಷ್ಟ ಕಾಲದಲ್ಲಿ ದೇಶದ ಜನಕ್ಕೆ ಹೆಗಲಾಗಲು ರಿಲಯನ್ಸ್​​ ಸಂಸ್ಥೆ ಮುಂದಾಗಿದೆ. ಉಚಿತವಾಗಿ ಹಾಗೂ ನಿರಂತವಾಗಿ ಜೀವಗಳನ್ನು ಉಳಿಸುವ ಕಾರ್ಯ ಸಂಸ್ಥೆಯಿಂದ ನಡೆಯಲಿದೆ. ಜೊತೆಯಾಗಿ ನಾವೆಲ್ಲಾ ಈ ಯುದ್ಧವನ್ನು ಗೆಲ್ಲೋಣ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು