News Karnataka Kannada
Monday, April 22 2024
Cricket
ವಿದೇಶ

ಸಾಲದ ಕಂತು ಮುಂದೂಡಿಕೆ ಅವಧಿ ವಿಸ್ತರಣೆ ಅಸಾಧ್ಯ: ಆರ್‌ಬಿಐ

Photo Credit :

ಸಾಲದ ಕಂತು ಮುಂದೂಡಿಕೆ ಅವಧಿ ವಿಸ್ತರಣೆ ಅಸಾಧ್ಯ: ಆರ್‌ಬಿಐ

ನವದೆಹಲಿ: ಸಾಲದ ಕಂತು ಮುಂದೂಡಿಕೆ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಸಾಲದ ಕಂತು ಪಾವತಿ ಅವಧಿಯನ್ನು ವಿಸ್ತರಿಸಿದರೆ ಆರ್ಥಿಕತೆಯಲ್ಲಿ ಸಾಲದ ಸೃಷ್ಟಿ ಹೆಚ್ಚಾಗುವಂತೆ ಆಗಲಿದೆ ಎಂದು ಆರ್‌ಬಿಐ ಸುಪ್ರೀಂ ಕೊರ್ಟ್‌ಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಕಾರಣ ತಿಳಿಸಿದೆ.

ಆ.06 ರಂದು ರೆಸೆಲ್ಯೂಷನ್ ಫ್ರೇಮ್ ವರ್ಕ್ ಅನ್ನು ರಿಸರ್ವ್ ಬ್ಯಾಂಕ್ ಘೋಷಿಸಿದ್ದು, ಕೋವಿಡ್-19 ನಿಂದಾಗಿ ಆರ್ಥಿಕವಾಗಿ ಕುಸಿದಿರುವ ರಿಯಲ್ ಸೆಕ್ಟರ್ ಆಕ್ಟಿವಿಟೀಸ್ ನ ಉತ್ತೇಜನದೆಡೆಗೆ ಗುರಿ ಹೊಂದಿದೆ ಹಾಗೂ ಅಂತಿಮವಾಗಿ ಸಾಲ ಪಡೆಯುವವರಿಗೆ ಉಂಟಾಗುವ ಪರಿಣಾಮಗಳನ್ನು ತಗ್ಗಿಸುವುದಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಾಲಗಾರರ ಖಾತೆಗಳು ಮಾತ್ರ ರೆಸೆಲ್ಯೂಷನ್ ಗೆ ಅರ್ಹರಾಗಿರುತ್ತಾರೆ, ಆದರೆ 30 ದಿನಗಳಿಗೂ ಮೀರಿದ ಸುಸ್ತಿದಾರರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಆರ್ ಬಿಐ ತಿಳಿಸಿದೆ.

ಸಂಬಂಧಿಸಿದ ಕ್ಷೇತ್ರಗಳ ಉದ್ಯಮಿಗಳಿಗೆ ಸಾಲ ನೀಡುವಾಗ ಈ ಸಾಲ ಪುನರ್​​ ರಚನೆ ಮಾರ್ಗಸೂಚಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಬ್ಯಾಂಕುಗಳಿಗೆ ಸಮಿತಿ ಶಿಫಾರಸುಗಳನ್ನು ಪರಿಗಣಿಸಲಾಗುವುದು ಎಂದೂ ಆರ್ ಬಿಐ ಪ್ರಮಾಣಪತ್ರದಲ್ಲಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು