News Karnataka Kannada
Thursday, April 25 2024
ವಿದೇಶ

ಸತತ ನಾಲ್ಕನೇ ಬಾರಿ ಪುದುಚೇರಿ ಸಿಎಂ ಪಟ್ಟ ಸ್ವೀಕರಿಸಿದ ಎಐಎನ್‌ಆರ್‌ಸಿ ಸ್ಥಾಪಕ ಎನ್ ರಂಗಸ್ವಾಮಿ

Photo Credit :

ಸತತ ನಾಲ್ಕನೇ ಬಾರಿ ಪುದುಚೇರಿ ಸಿಎಂ ಪಟ್ಟ ಸ್ವೀಕರಿಸಿದ ಎಐಎನ್‌ಆರ್‌ಸಿ ಸ್ಥಾಪಕ ಎನ್ ರಂಗಸ್ವಾಮಿ

ಪುದುಚೇರಿ: ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎಐಎನ್‌ಆರ್‌ಸಿ ಸ್ಥಾಪಕ ಅಧ್ಯಕ್ಷ ಎನ್ ರಂಗಸ್ವಾಮಿ. 

 

 ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಶುಕ್ರವಾರ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮತ್ತೆ ತಮ್ಮ ಅಧಿಕಾರ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. 

 

ಇಂದು ರಾಜಭನದಲ್ಲಿ ನಡೆದ ಸಮಾರಂಭದಲ್ಲಿ ಎನ್‌ಡಿಎ ಗೆಲುವಿಗೆ ಕಾರಣರಾದ 71 ವರ್ಷದ ಅನುಭವಿ ನಾಯಕ ರಂಗಸ್ವಾಮಿ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳಿಸಾಯಿ ಸೌಂದರ್ಯರಾಜನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

 

ಕೋವಿಡ್ ನಿರ್ಬಂಧದಿಂದಾಗಿ, ಚುನಾಯಿತ ಶಾಸಕರು, ಪಕ್ಷದ ಹಿರಿಯ ನಾಯಕರು, ಸರ್ಕಾರ ಮುಖ್ಯ ಕಾರ್ಯದರ್ಶಿ ಅಶ್ವನಿ ಕುಮಾರ್ ಮತ್ತು ಇತರ ಸರ್ಕಾರಿ ಅಧಿಕಾರಿಗಳು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

 

ಪುದುಚೇರಿಯಲ್ಲಿ ರಂಗಸ್ವಾಮಿ ನೇತೃತ್ವದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್(ಎಐಎನ್‌ಆರ್‌ಸಿ) ಹಾಗೂ ಬಿಜೆಪಿ ಮೈತ್ರಿಕೂಟದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಂದಿನ ವಾರ ಎರಡು ಪಕ್ಷಗಳು ಪರಸ್ಪರ ನಿರ್ಧಾರ ಕೈಗೊಂಡ ನಂತರ ಎಐಎನ್‌ಆರ್‌ಸಿ ಮತ್ತು ಬಿಜೆಪಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು