News Karnataka Kannada
Wednesday, April 24 2024
Cricket
ವಿದೇಶ

ಶ್ರೀಲಂಕಾದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವಂತಿಲ್ಲ

Photo Credit :

ಶ್ರೀಲಂಕಾದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವಂತಿಲ್ಲ

ಕೊಲಂಬೊ: ಶ್ರೀಲಂಕಾದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿಕೊಂಡು ಓಡಾಡುವಂತಿಲ್ಲ. ಅಷ್ಟೇ ಅದಲ್ಲದೇ, ಯಾವುದೇ ರೀತಿಯ ಮುಖ ಮುಸುಕುಗಳನ್ನೂ ಕೂಡ ಇಲ್ಲಿ ಧರಿಸುವಂತಿಲ್ಲ. 

 

ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಅವರು ಕಳೆದ ಮಾರ್ಚ್‌ನಲ್ಲಿ ಈ ಕುರಿತ ಟಿಪ್ಪಣಿಗೆ ಸಹಿ ಹಾಕಿದ್ದರು. ಬುರ್ಖಾಗಳನ್ನು ನಿಷೇಧಿಸಲು ಸಂಪುಟದ ಅನುಮೋದನೆಯನ್ನು ಅವರು ಕೋರಿದ್ದರು. ನಂತರ ಇದರ ಬಗ್ಗೆ ವಿವಾದದ ಅಲೆ ಎದ್ದಿತ್ತು. ಅದರ ನಡುವೆಯೂ ಇದೀಗ ಶ್ರೀಲಂಕಾ ಸಚಿವ ಸಂಪುಟ ಬುರ್ಖಾ ನಿಷೇಧಕ್ಕೆ ಅನುಮೋದನೆ ನೀಡಿದೆ.

 

ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ ಎಂಬ ಕಾರಣ ನೀಡಿರುವ ಶ್ರೀಲಂಕಾದ ಸಚಿವ ಸಂಪುಟವು ಇಂಥದ್ದೊಂದು ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಇದಕ್ಕೆ ಭಾರಿ ಪರ- ವಿರೋಧಗಳು ಬಂದಿದ್ದವು. ಇದು ಬಹಳ ವಿವಾದವನ್ನೂ ಸೃಷ್ಟಿಸಿತ್ತು. ಆದರೆ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಇಂಥದ್ದೊಂದು ಕ್ರಮ ಅನಿವಾರ್ಯ ಎಂದು ಇಲ್ಲಿಯ ಸರ್ಕಾರ ಹೇಳಿದೆ.

 

 ಈ ಕುರಿತು ಸಂಪುಟ ವಕ್ತಾರ ಮತ್ತು ವಾರ್ತಾ ಸಚಿವ ಕೆಹಲೀಯಾ ರಂಬೂಕ್ವೆಲ್ಲ ಸ್ಪಷ್ಟಪಡಿಸಿದ್ದು, ಈಸ್ಟರ್ ಭಾನುವಾರದಂದು ಹೋಟೆಲ್ ಗಳು ಮತ್ತು ಚರ್ಚುಗಳ ಮೇಲೆ ಸಂಘಟಿತ ಭಯೋತ್ಪಾದಕ ದಾಳಿಗಳ ಅಲೆಯ ಎರಡು ವರ್ಷಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು