News Karnataka Kannada
Tuesday, April 23 2024
Cricket
ವಿದೇಶ

ಶ್ರೀನಿವಾಸ ಮತ್ತಿತರರಿಗೆ ಕ್ಲೀನ್‌ಚಿಟ್‌: ದೆಹಲಿ ಪೊಲೀಸರ ವಿರುದ್ಧ ಹೈಕೋರ್ಟ್‌ ಗರಂ

Photo Credit :

ಶ್ರೀನಿವಾಸ ಮತ್ತಿತರರಿಗೆ ಕ್ಲೀನ್‌ಚಿಟ್‌: ದೆಹಲಿ ಪೊಲೀಸರ ವಿರುದ್ಧ ಹೈಕೋರ್ಟ್‌ ಗರಂ

ನವದೆಹಲಿ: ಔಷಧಿ, ವೈದ್ಯಕೀಯ ಆಮ್ಲಜನಕ ಖರೀದಿಸಿ ಕೊರೊನಾ ಪೀಡಿತರಿಗೆ ವಿತರಿಸಲು ರಾಜಕಾರಣಿಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಶ್ರೀನಿವಾಸ್ ಮತ್ತಿತರರಿಗೆ ಕ್ಲೀನ್‌ ಚಿಟ್‌ ನೀಡಿ ದೆಹಲಿ ಪೊಲೀಸರು ವರದಿ ಸಲ್ಲಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
‘ರಾಜಕೀಯ ಪಕ್ಷಗಳು ಸಾಂಕ್ರಾಮಿಕದಿಂದ ತಲೆದೋರಿರುವ ದುಃಸ್ಥಿತಿಯ ಲಾಭ ಪಡೆಯುವಂತಾಗಬಾರದು. ರಾಜಕಾರಣಿಗಳು ವೈದ್ಯರ ಚೀಟಿ ಇಲ್ಲದೆ ಈ ಔಷಧಿ ಖರೀದಿಸಿದ್ದಾದರೂ ಹೇಗೆ’ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠವು ಸೋಮವಾರ ನಡೆದ ವಿಚಾರಣೆ ವೇಳೆ ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.ರಾಷ್ಟ್ರ ರಾಜಧಾನಿಯಲ್ಲಿ ರೆಮ್‌ಡಿಸಿವಿರ್ ಇಂಜಕ್ಷನ್‌ ಸೇರಿದಂತೆ ಕೋವಿಡ್‌–19 ರೋಗಿಗಳಿಗೆ ನೀಡಲಾಗುವ ಔಷಧಿಗಳ ಅಭಾವ ಉಂಟಾಗಿದೆ. ಆದರೂ ಅವುಗಳನ್ನು ಸಂಗ್ರಹಿಸಿ ವಿತರಿಸಿರುವ ರಾಜಕಾರಣಿಗಳ ಬಗ್ಗೆ ಪೊಲೀಸರು ಸಹಾನುಭೂತಿ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.
‘ರಾಜಕಾರಣಿಗಳು ಇಂಥ ಪರಿಸ್ಥಿತಿಯ ಲಾಭ ಪಡೆದು ಜನಪ್ರಿಯತೆ ಗಳಿಸುವುದನ್ನು ನಾವು ಒಪ್ಪುವುದಿಲ್ಲ. ಅವರಿಗೆ ಔಷಧಿ ಖರೀದಿಸಲು ಅವಕಾಶ ನೀಡಬಾರದು. ಜವಾಬ್ದಾರಿಯನ್ನೇ ಅರಿಯದ ನೀವು ಸತ್ಯವನ್ನು ಹೊರಹಾಕಲು ಆಸಕ್ತಿ ತೋರುತ್ತಿಲ್ಲ’ ಎಂದು ನ್ಯಾಯಪೀಠ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ‘ಇಂಥ ಸೇವೆಯು ಜನಪ್ರಿಯತೆ ಗಳಿಸುವುದಕ್ಕಲ್ಲ. ಬದಲಿಗೆ, ಮಾನವೀಯ ನೆಲೆಗಟ್ಟಿನಲ್ಲಿ ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ’ ಎಂಬುದೇ ರಾಜಕಾರಣಿಗಳ ಉದ್ದೇಶವಾಗಿದ್ದಲ್ಲಿ, ತಮ್ಮ ಬಳಿ ಇರುವ ಔಷಧಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ, ಸರ್ಕಾರಿ ಆಸ್ಪತ್ರೆಗಳ ಮೂಲಕ ಜನತೆಗೆ ವಿತರಿಸುವಂತೆ ಕೋರಲಿ ಎಂದು ನ್ಯಾಯಮೂರ್ತಿಗಳು ಹೇಳಿದರು.
ಪೊಲೀಸರು ಈ ಕುರಿತು ಮತ್ತೊಮ್ಮೆ ಸೂಕ್ತ ವಿಚಾರಣೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲಿ ಎಂದು ಪೀಠ ಸೂಚಿಸಿತು.‘ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸಲು 6 ವಾರಗಳ ಸಮಯಾವಕಾಶ ಬೇಕು’ ಎಂಬ ಪೊಲೀಸರ ಮನವಿ ತಿರಸ್ಕರಿಸಿದ ಪೀಠ, ಅಷ್ಟರೊಳಗೆ ಈ ಸಮಸ್ಯೆ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು ಎಂದು ಹೇಳಿತು.
ರಾಜಕಾರಣಿಗಳು ಸಂಗ್ರಹಿಸಿರುವ ಔಷಧಿಯನ್ನು ವಶಕ್ಕೆ ಪಡೆದು ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಒಪ್ಪಿಸಬೇಕು ಎಂದೂ ಪೊಲೀಸರಿಗೆ ಸೂಚಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಮೇ 24ಕ್ಕೆ ನಿಗದಿಪಡಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು