News Karnataka Kannada
Wednesday, April 17 2024
Cricket
ವಿದೇಶ

ವುಹಾನ್ ನಲ್ಲಿ ಬೀಸಿದ ಭಾರೀ ಸುಂಟರಗಾಳಿ; 250ಕ್ಕೂ ಹೆಚ್ಚು ಮಂದಿ ಗಾಯಾಳು

Photo Credit :

ವುಹಾನ್ ನಲ್ಲಿ ಬೀಸಿದ ಭಾರೀ ಸುಂಟರಗಾಳಿ; 250ಕ್ಕೂ ಹೆಚ್ಚು ಮಂದಿ ಗಾಯಾಳು

ಬೀಜಿಂಗ್‌ : ಚೀನಾದ ವುಹಾನ್ ಹಾಗೂ ಸುತ್ತೋ ನಗರಗಳಲ್ಲಿ ಬೀಸಿದ ಭಾರೀ ಸುಂಟರಗಾಳಿ. ಇದರಿಂದಾಗಿ 10 ಕ್ಕೂ ಹೆಚ್ಚು ಮಂದಿ ಮೃತಪಟ್ಟು 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

 

ವುಹಾನ್ ನಗರದಲ್ಲಿ ಪ್ರತಿ ಸೆಕೆಂಡ್‌ಗೆ 23.9 ಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಗೆ ಈ ದುರಂತ ಸಂಭವಿಸಿದ್ದು , ಘಟನೆಯಲ್ಲಿ ಹಲವು ಕಟ್ಟಡಗಳು ಹಾಗೂ ಮರಗಳು ಧರೆಗುರುಳಿವೆ . ಇಂದು ಮುಂಜಾನೆ 27 ಮನೆಗಳು ಕುಸಿದಿವೆ . ಎರಡು ಟವರ್ ಕ್ರೇನ್’ಗಳು ಹಾಗೂ 8 ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿದ್ದ ಕಟ್ಟಡಕ್ಕೂ ಭಾರಿ ಹಾನಿಯಾಗಿದೆ ಎಂದು ವರದಿಗಳು ತಿಳಿಸಿದೆ . 

 

ಸುಝನಗರದ ಜಿಯಾಂಗ್ಗು ಪ್ರದೇಶದಲ್ಲಿ ಬೀಸಿದ ಬಿರುಗಾಳಿಗೆ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು , 21 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ . ಈ ಬಿರುಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿವೆ . 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು