News Karnataka Kannada
Saturday, April 13 2024
Cricket
ವಿದೇಶ

ವಿದೇಶಿ ಕೊರೋನ ನಿರೋಧಕ ಲಸಿಕೆಗಳ ಬಳಕೆಗೆ ಹಸಿರು ನಿಶಾನೆ

Photo Credit :

 ವಿದೇಶಿ ಕೊರೋನ ನಿರೋಧಕ ಲಸಿಕೆಗಳ ಬಳಕೆಗೆ ಹಸಿರು ನಿಶಾನೆ

ನವದೆಹಲಿ, : ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ಇದೀಗ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ- ಡಿಸಿಜಿಐ ದೊಡ್ಡ ಹೆಜ್ಜೆಯಿಟ್ಟಿದೆ. ಭಾರತದಲ್ಲಿ ವಿದೇಶಿ ಕೊರೊನಾ ಲಸಿಕೆಗಳ ನಿರ್ಬಂಧಿತ ಬಳಕೆಗೆ ಹಸಿರು ನಿಶಾನೆ ತೋರಿದೆ. ಯುಎಸ್‌ಎಫ್‌ಡಿಎ ಹಾಗೂ ಇನ್ನಿತರ ದೇಶಗಳಲ್ಲಿ ಅನುಮೋದನೆ ಪಡೆದಿರುವ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಿರುವುದಾಗಿ ತಿಳಿದುಬಂದಿದೆ.
ಫೈಜರ್ ಹಾಗೂ ಮಾಡರ್ನಾದಂಥ ಲಸಿಕೆಗಳ ಬಳಕೆಗೆ ದೇಶದಲ್ಲಿ ಅನುಮತಿ ನೀಡಿದ್ದು, ಭಾರತದಲ್ಲಿ ಈಚೆಗೆ ಕೊರೊನಾ ಲಸಿಕೆಗಳಿಗೆ ಕೊರತೆ ಎದುರಾದ ಬೆನ್ನಲ್ಲೇ ಡಿಸಿಜಿಐ ಈ ನಿರ್ಧಾರ ಪ್ರಕಟಿಸಿದೆ.
ಯುಎಸ್‌ಎಫ್‌ಡಿಎ, ಇಎಂಎ, ಯುಕೆ ಎಂಎಚ್‌ಆರ್‌ಎ, ಪಿಎಂಡಿಎ ಜಪಾನ್ ಅನುಮೋದನೆ ನೀಡಿದ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಪಟ್ಟಿಯಲ್ಲಿ ಉಲ್ಲೇಖಿಸಿದ ವಿದೇಶಿ ಕೊರೊನಾ ಲಸಿಕೆಗಳನ್ನು ತುರ್ತು ಹಾಗೂ ನಿರ್ಬಂಧಿತ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಈ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಕೂಡ ಕೊರೊನಾ ಸೋಂಕಿನ ವಿರುದ್ಧ ತುರ್ತು ಬಳಕೆಗೆ ಸ್ಥಳೀಯವಾಗಿ ಹಲವು ಹಂತದ ಪರೀಕ್ಷೆಗಳಿಗೆ ಒಳಪಟ್ಟಿದ್ದವು.
ಸದ್ಯಕ್ಕೆ ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಫುಟ್ನಿಕ್ ವಿ ಲಸಿಕೆಗಳನ್ನು ನೀಡಲಾಗುತ್ತಿದೆ. 130 ದಿನಗಳಲ್ಲಿ 20 ಕೋಟಿಗೂ ಹೆಚ್ಚಿನ ಲಸಿಕೆಯನ್ನು ಭಾರತ ನೀಡಿದ್ದು, ಅಮೆರಿಕ ನಂತರ ಹೆಚ್ಚು ಲಸಿಕೆ ನೀಡಿದ ದೇಶ ಭಾರತ ಎನಿಸಿಕೊಂಡಿದೆ. ಮೇ ತಿಂಗಳವರೆಗೂ 45 ವರ್ಷಕ್ಕೂ ಮೇಲ್ಪಟ್ಟ 34% ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 60 ಹಾಗೂ 60ಕ್ಕೂ ಹೆಚ್ಚು ವಯಸ್ಸಿನ 42% ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಿರುವುದಾಗಿ ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು