News Karnataka Kannada
Monday, April 22 2024
Cricket
ವಿದೇಶ

ವಿದೇಶಿಗರನ್ನು ಸೆಳೆದಿರುವ ‘ ಗೋ ಅಪ್ಪುಗೆ ಥೆರಪಿ ‘

Photo Credit :

ವಿದೇಶಿಗರನ್ನು ಸೆಳೆದಿರುವ  ' ಗೋ ಅಪ್ಪುಗೆ ಥೆರಪಿ '

ವಾಷಿಂಗ್ಟನ್ : ಗೋವನ್ನು ಭಾರತೀಯರು ಮಾತೃ ಸಮಾಜದಲ್ಲಿ ಇರಿಸಿ ಪೂಜಿಸುತ್ತಾರೆ. ಇಂತಹ ಮಹತ್ವ ಸ್ಥಾನದ ಕುರಿತು ವಿದೇಶಿಗರು ಒಲವು ತೋರಿಸಿದ್ದು, ವಿದೇಶಗಳಲ್ಲೂ ಈಗ ಗೋವು ಮಹತ್ವ ಪಡೆಯುತ್ತಿದೆ .

 

 ಹೌದು, ವಿದೇಶಗಳಲ್ಲಿ ‘ ಗೋ ಅಪ್ಪುಗೆ ಥೆರಪಿ ‘ ಎಂದು ಥೆರಪಿ ಒಂದನ್ನು ಪ್ರಾರಂಭಿಸಿದ್ದು, ಜನಪ್ರಿಯವಾಗುತ್ತಿದೆ . ಇದಕ್ಕಾಗಿ ಗೋಪಾಲಕರಿಗೆ ಗಂಟೆಗೆ ಇಷ್ಟು ಎಂದು ಹಣ ನೀಡಿ ಗೋ ಸಾಂಗತ್ಯ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ . ಅದರಲ್ಲಿಯೂ ಅಮೆರಿಕದಲ್ಲಿ ಈ ವಿಧಾನ ಹೆಚ್ಚು ಪ್ರಚಲಿತಕ್ಕೆ ಬಂದಿದೆ. 

 

 ಪೋರ್ಟ್ಸ್ ನಿಯತಕಾಲಿಕದ ಇತ್ತೀಚಿನ ವರದಿಯ ಪ್ರಕಾರ , ಅರಿಜೋನದ ಫಾರ್ಮ್ ನಲ್ಲಿ ಗೋ ಆಲಿಂಗನಕ್ಕೆ ಗಂಟೆಗೆ 75 ಡಾಲರ್ ಪಡೆಯುತ್ತಾರೆ . ಇಲ್ಲಿ ದಿನಕ್ಕೆ 20 ಜನರು ಗೋ ಅಪ್ಪುಗೆ ಪಡೆಯುತ್ತಾರೆ . ಇದು ನೆದರ್ಲೆಂಡ್ ನಲ್ಲಿ ಆರಂಭವಾಗಿ ಈಗ ಸ್ವಿಚ್ಚರ್ಲೆಂಡ್ ಮತ್ತು ಅಮೆರಿಕದ ಫಾರ್ಮ್ ಗಳಲ್ಲೂ ಟ್ರೆಂಡ್ ಆಗುತ್ತಿದೆ . 

 

ದನಗಳನ್ನು ಅಪ್ಪಿಕೊಳ್ಳುವ ಕ್ರಿಯೆ ಮಾನವ ದೇಹದಲ್ಲಿ ಆಕ್ಸಿಟೊಸಾನ್ ಎಂಬ ಹಾರ್ಮೋನ್ ಬಿಡುಗಡೆ ಆಗುವಂತೆ ಮಾಡಿ , ಒತ್ತಡ ಕಡಿಮೆಗೊಳಿಸಿ ಸಕಾರಾತ್ಮಕ ಭಾವ ಹೆಚ್ಚುವಂತೆ ಮಾಡುತ್ತದೆ ಎಂದು ಹೇಳಲಾಗಿದ್ದು, ಈ ಬಗೆಗಿನ ವೀಡಿಯೋವೊಂದನ್ನು ಮಿಲಿಂದ್ ದೆವರಾ ಹಂಚಿಕೊಂಡಿದ್ದಾರೆ. ಭಾರತ ಈ ವಿಷಯದಲ್ಲಿ ತುಂಬಾ ಮುಂದಿದೆ . 3,000 ವರ್ಷಗಳ ಹಿಂದೆಯೇ ನಮ್ಮ ಗ್ರಂಥಗಳು ಗೋವನ್ನು ಪೂಜನೀಯವಾಗಿಸಿದ್ದವು ಎಂದು ಬರೆದುಕೊಂಡಿದ್ದಾರೆ .

 

ಈ ರೀತಿಯಾಗಿ ವಿದೇಶಗಳಲ್ಲಿಯೂ ಗೋವು ಒಂದು ಪೂಜನೀಯ ಸ್ಥಾನವನ್ನು ಪಡೆಯುತ್ತಿದೆ. 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು