News Karnataka Kannada
Monday, April 22 2024
Cricket
ವಿದೇಶ

ವಿಜಯನಗರದಲ್ಲೊಂದು ಮರ್ಯಾದಾ ಹತ್ಯೆ?

Photo Credit :

ವಿಜಯನಗರದಲ್ಲೊಂದು ಮರ್ಯಾದಾ ಹತ್ಯೆ?

ಬಳ್ಳಾರಿ: ಅನ್ಯಜಾತಿಯ ಯುವಕನೊಂದಿಗೆ ಪ್ರೀತಿ ಮಾಡಿದ ಅಪ್ರಾಪ್ತೆಯನ್ನು ಆಕೆಯ ಕುಟುಂಬಸ್ಥರು ರಾತ್ರೋರಾತ್ರಿ ಕೊಲೆಗೈದು ಸುಟ್ಟುಹಾಕಿದ್ದಾರೆ ಎಂಬ ಆಘಾತಕಾರಿ ಪ್ರಕರಣ ನೂತನ ಜಿಲ್ಲೆ ವಿಜಯನಗರದಲ್ಲಿ ಬೆಳಕಿಗೆ ಬಂದಿದೆ.
ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ 17 ವರ್ಷದ ಬಾಲಕಿ ಮತ್ತು ಆಕೆಯ ಮನೆ ಮುಂದಿನ ಮನೆಯ ಯುವಕ ಇಬ್ಬರೂ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಮನೆಯವರ ವಿರೋಧ ವ್ಯಕ್ತವಾಗಿದ್ದರಿಂದೆ ಈ ಹಿಂದೆ ವಿಷ ಕುಡಿದಿದ್ದಳಂತೆ. ಪ್ರಥಮ ಪಿಯುಸಿ ಓದುತ್ತಿದ್ದ ಈಕೆ ಮೂರು ದಿನದ ಹಿಂದೆ ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಮದುವೆ ಮಾಡಿಕೊಳ್ಳವ ಆಸೆಯಲ್ಲಿ ಇಬ್ಬರೂ ಪಕ್ಕದ ಗ್ರಾಮದಲ್ಲಿ ತಂಗಿದ್ದರು.
ಈ ವಿಷಯ ತಿಳಿದು ಅಲ್ಲಿಗೆ ಹೋಗಿದ್ದ ಬಾಲಕಿ ಕಡೆಯವರು ಪ್ರೇಮಿಗಳಿಬ್ಬರನ್ನೂ ಗ್ರಾಮಕ್ಕೆ ಕರೆತಂದಿದ್ದರು. ಪ್ರಾಣ ಭಯದಿಂದ ಪ್ರಿಯಕರ ಊರುಬಿಟ್ಟಿದ್ದಾನೆ. ಇತ್ತ ಹುಡುಗಿ ಯಾವುದೇ ಕಾರಣಕ್ಕೂ ಪ್ರಿಯಕರನನ್ನು ಬಿಟ್ಟು ಬದುಕುವುದಿಲ್ಲ ಎಂದು ಪಟ್ಟು ಹಿದಿಡಿದ್ದಳು. ಆದರೀಗ ಆಕೆ ಬದುಕಿಲ್ಲ.ಅಪ್ರಾಪ್ತೆ ಕಡೆಯವರು ನಿನ್ನೆ(ಮಂಗಳವಾರ) ರಾತ್ರಿ 10.30ರ ವೇಳೆಗೆ ಆಕೆಗೆ ಬಲವಂತವಾಗಿ ವಿಷವುಣಿಸಿ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಗ್ರಾಮದ ಹೊರಕ್ಕೆ ಕರೆದೊಯ್ದು ಅಲ್ಲಿಯೇ ಕೊಲೆ ಮಾಡಿ ರಾತ್ರೋರಾತ್ರಿ ಸುಟ್ಟು ಹಾಕಿದ್ದಾರೆ ಎಂಬ ಗಂಭಿರ ಆರೋಪ ಕೇಳಿಬಂದಿದೆ. ಈ ವೇಳೆ ಬಾಲಕಿಯ ತಂದೆ- ತಾಯಿಯನ್ನು ಬಲವಂತವಾಗಿ ಮನೆಯಲ್ಲೇ ಕೂಡಿ ಹಾಕಿದ್ದರು ಎನ್ನಲಾಗಿದೆ. ಇಡೀ ಘಟನೆಯನ್ನ ಅವಲೋಕಿಸಿದರೆ ಇದು ಮರ್ಯಾದಾ ಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅತ್ತ ಈ ಪ್ರಕರಣವನ್ನು ಮುಚ್ಚಿ ಹಾಕಿಸುವ ಪ್ರಯತ್ನವೂ ನಡೆಯುತ್ತಿದೆ.
ಅಪ್ರಾಪ್ತೆ ಬಾಲಕಿ ವಿಷ ಸೇವಿಸಿ ಸತ್ತಿದ್ದಾಳೆ. ಪಿಎಂ ಮಾಡದೆ ಕುಟುಂಬಸ್ಥರು ಬಾಲಕಿ ದೇಹವನ್ನ ಸುಟ್ಟಿ ದ್ದಾರೆ. ಈಗಾಗಲೇ ಬೇರೊಬ್ಬ ಹುಡುಗನೊಂದಿಗೆ ಎಂಗೇಜ್​ಮೆಂಟ್ ಕೂಡ ಆಕೆಗೆ ಆಗಿತ್ತು. ಅಷ್ಟರೊಳಗೆ ಈ ಬಾಲಕಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಅವರಿಬ್ಬರನ್ನೂ ಕರೆತಂದು ಬುದ್ಧಿ ಹೇಳಿ ಅವರವರ ಮನೆಗೆ ಗ್ರಾಮಸ್ಥರು ಕಳಿಸಿಕೊಟ್ಟಿದ್ದರು. ಅಷ್ಟರಲ್ಲೇ ಈ ಘಟನೆ ನಡೆದು ಹೋಗಿಬಿಟ್ಟಿದೆ ಎಂದು ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು